ಹೈದ್ರಾಬಾದ್: ತಾನು ಅಭಿವೃದ್ಧಿ ಪಡಿಸಿದ ಆ್ಯಪ್ ವಿಫಲವಾಯಿತೆಂದು ಮನನೊಂದ ಟೆಕ್ಕಿ ಆತ್ಮಹತ್ಯೆ ಶರಣಾಗಿರುವ ಘಟನೆ ಹೈದ್ರಾಬಾದ್ ನಲ್ಲಿ ನಿನ್ನೆ ನಡೆದಿದೆ.
33 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಲಕ್ಕಿ ಗುಪ್ತಾ ಅಗರ್ವಾಲ್ ಆತ್ಮಹತ್ಯೆಗೆ ಶರಣಾದವರು. ಅಮೀರ್ ಪೆಟ್ ನ ಡಿಕೆ ರಸ್ತೆಯ ಸ್ವರ್ಣ ಪ್ಲಾಜಾ ಅಪಾರ್ಟ್ ಮೆಂಟ್ ನಲ್ಲಿ ಲಕ್ಕಿ ಪೋಷಕರೊಂದಿಗೆ ವಾಸವಾಗಿದ್ದರು.
ನೇಟ್ರೋಜನ್ ಸಿಲಿಂಡರ್ ಬಳಸಿಕೊಂಡು ಲಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಲಕ್ಕಿ ಆತ್ಮಹತ್ಯೆ ಪತ್ರ ಬರೆದಿದ್ದಾರೆ. ದುಃಖದಿಂದ ಸಾಯುತ್ತಿರುವ ನಾನು ಅದೃಷ್ಟಶಾಲಿ ಎಂದು ಬರೆದಿಟ್ಟಿದ್ದಾನೆ.
ಮುಖಕ್ಕೆ ಮುಸುಕು ಹಾಕಿಕೊಂಡು ನೈಟ್ರೋಜನ್ ಸಿಲಿಂಡರ್ ಗ್ಯಾಸ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಮಾರ್ಚ್ 17ರಂದೇ ಲಕ್ಕಿ ನೈಟ್ರೋಜನ್ ಸಿಲಿಂಡರ್ ಖರೀದಿಸಿದ್ದರು.
ನೋವಿಲ್ಲದೇ ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಆನ್ ಲೈನ್ ನಲ್ಲಿ ಲಕ್ಕಿ ಜಾಲಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.