ವಿಟಮಿನ್ ಡಿ ಮಾತ್ರೆ ಅಧಿಕ ಸೇವಿಸಿದ 10 ವರ್ಷದ ಬಾಲಕ ಸಾವು

ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಡಿ ಮಾತ್ರೆ ಸೇವಿಸಿ ಬಾಲಕ ಪ್ರಾಣ ಕಳೆದು ಕೊಂಡಿದ್ದಾನೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ:  ಅತಿಯಾದರೇ ಅಮೃತವೂ ಕೂಡ ವಿಷವಾಗುತ್ತದೆ ಎಂಬುದಕ್ಕೆ ಈ ಪ್ರಕರಣವೊಂದು ಜೀವಂತ ಸಾಕ್ಷಿ.

ಈ ಬಾಲಕನಿಗೆ ದೈಹಿಕ ಬೆಳವಣಿಗೆ ಕುಂಠಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ದೇಹದ ಬೆಳವಣಿಗೆಗಾಗಿ ವೈದ್ಯರು ಆತನಿಗೆ ವಿಟಮಿನ್  ಡಿ ಸೇವಿಸುವಂತೆ ಹೇಳಿದ್ದರು.  ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಡಿ ಮಾತ್ರೆ ಸೇವಿಸಿ ಪ್ರಾಣ ಕಳೆದು ಕೊಂಡಿದ್ದಾನೆ.
ಬಾಲಕನ ದೈಹಿಕ ಬೆಳವಣಿಕೆ ಕುಂಟಿತಗೊಂಡಿದ್ದ ಹಿನ್ನೆಲೆಯಲ್ಲಿ ವೈದ್ಯರು 6ಲಕ್ಷ ಇಂಟರ್​ನ್ಯಾಷನಲ್ ಯೂನಿಟ್(ಐಯು)ಗಳನ್ನು ಒಟ್ಟು 21 ದಿನಗಳ ಕಾಲ ಸೇವನೆ ಮಾಡುವಂತೆ ಸೂಚಿಸಿದ್ದರು.

ಅದೇ ಪ್ರಕಾರ ಬಾಲಕ ವಿಟಮಿನ್ ‘ಡಿ’ ಸೇವನೆ ಮಾಡಿದ್ದು, ಇದು ಅಧಿಕ ಪ್ರಮಾಣದ್ದಾಗಿದ್ದರಿಂದ ದೇಹಕ್ಕೆ ಅಲರ್ಜಿಯಾಗಿದೆ. ಪರಿಣಾಮ ಬಾಲಕನಲ್ಲಿ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದರಿಂದ ಗಾಬರಿಯಾದ ಪೋಷಕರು ಏಮ್್ಸ ಆಸ್ಪತ್ರೆಗೆ ದಾಖಲಿಸಿದಾಗ ವಿಟಮಿನ್ ‘ಡಿ’ ಅತಿಯಾದ ಸೇವನೆಯಿಂದ ಅಡ್ಡ ಪರಿಣಾಮ ಆಗಿರುವುದು ಗೊತ್ತಾಗಿದೆ.

ಬಾಲಕ ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವು, ವಾಂತಿಯಿಂದ ಬಳಲುತ್ತಿದ್ದ. ತಕ್ಷಣ ಇದಕ್ಕೆ ಚಿಕಿತ್ಸೆ ನೀಡಲಾಯಿತಾದರೂ, ಪ್ರಯೋಜನವಾಗದೇ ಕೊನೆಯುಸಿರೆಳೆದಿದ್ದಾನೆ. ತುರ್ತು ನಿಗಾ ಘಟಕದಲ್ಲಿಟ್ಟು ಆತನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡಲಾಯಿತಾದರೂ, ಬಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಏಮ್್ಸ ವೈದ್ಯರು ಮಾಹಿತಿ ನೀಡಿದ್ದಾರೆ.

ವೈದ್ಯರ ಸಲಹೆ ಮಕ್ಕಳ ಸಾಮರ್ಥ್ಯಕ್ಕಿಂತ 30 ಪಟ್ಟು ಜಾಸ್ತಿ ಆಗಿತ್ತು ಎನ್ನುವ ಅಂಶ ಘಟನೆಯ ಬಳಿಕ ಗೊತ್ತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com