ಅದೇ ರೀತಿ ಕೇಂದ್ರ ಸರ್ಕಾರ ದೇಶೀಯ ತೈಲ ಕಂಪೆನಿಗಳಿಗೆ 10 ತಿಂಗಳವರೆಗೆ ಪ್ರತಿ ತಿಂಗಳು 25 ಪೈಸೆಯಂತೆ ಸೀಮೆಎಣ್ಣೆ ಬೆಲೆಯನ್ನು ಹೆಚ್ಚಿಸಲು ಸೂಚಿಸಿದೆ. ಅದರಂತೆ ಕಳೆದ ತಿಂಗಳು ಮೊದಲ ಬಾರಿಗೆ 25 ಪೈಸೆ ಹೆಚ್ಚಳವಾಗಿದ್ದ ಸೀಮೆ ಎಣ್ಣೆ ಬೆಲೆ ನಿನ್ನೆ ಮತ್ತೆ 25 ಪೈಸೆಯಷ್ಟು ಹೆಚ್ಚಾಗಿದೆ. ಒಂದು ಲೀಟರ್ ಸೀಮೆಎಣ್ಣೆ ಬೆಲೆ ರಾಜಧಾನಿ ದೆಹಲಿಯಲ್ಲಿ 15 ರೂಪಾಯಿ 46 ಪೈಸೆಯಷ್ಟಾಗಿದೆ.