ಜಿಎಸ್ ಟಿ ತೆರಿಗೆ ವಿಧಾನ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆ: ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಜಿಎಸ್ ಟಿ ತೆರಿಗೆ ವಿಧಾನ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಯಾಗಿದ್ದು, ಆದಾಯ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Updated on: 

ನವದೆಹಲಿ: ರಾಜ್ಯಸಭೆಯಲ್ಲಿ  ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಿಎಸ್ ಟಿ ಮಸೂದೆಯನ್ನು ಮಂಡಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಜಿಎಸ್ ಟಿ ತೆರಿಗೆ ವಿಧಾನ ಒಕ್ಕೂಟ ವ್ಯವಸ್ಥೆಗೆ ಅತ್ಯುತ್ತಮ ಉದಾಹರಣೆಯಾಗಿದ್ದು, ಆದಾಯ ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
ಜಿಎಸ್ ಟಿ ಮಸೂದೆಗೆ ಸಂಬಂಧಿಸಿದವರೆಲ್ಲರ ಶ್ರಮದಿಂದ ಒಮ್ಮತ ಮೊದಲು ಸಾಧ್ಯವಾಗಿದ್ದು, ಎಲ್ಲಾ ರಾಜ್ಯಗಳ ಎಲ್ಲಾ ಆತಂಕಗಳನ್ನು ನಿವಾರಿಸಲಾಗಿದೆ ಎಂದು ಜೇಟ್ಲಿ ಚರ್ಚೆಯಲ್ಲಿ ತಿಳಿಸಿದ್ದಾರೆ. ಉನ್ನತಾಧಿಕಾರ ಸಮಿತಿ ಹಾಗು ರಾಜಕೀಯ ಪಕ್ಷಗಳ ನಡುವಿನ ಮಾತುಕತೆಯ ಪರಿಣಾಮವಾಗಿ ಜಿಎಸ್ ಟಿ ಮಸೂದೆ ಬಗ್ಗೆ ಒಮ್ಮತ ಮೂಡುವುದು ಸಾಧ್ಯವಾಗಿದ್ದು, ಜಿಎಸ್ ಟಿ ಮಸೂದೆ ಅಂಗೀಕಾರಕ್ಕೆ ಈ ರೀತಿಯ ಮಾತುಕತೆಯ ಅಗತ್ಯವಿತ್ತು ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್ ಟಿ ಗೆ ಬೆಂಬಲ ಪಡೆಯಲು ರಾಜಕೀಯ ಪಕ್ಷಗಳ ನಡುವೆ ಒಮ್ಮತ ಮೂಡಿಸಲು ಯಶಸ್ವಿಯಾಗಿದ್ದು ಭಾರತದ ಇತಿಹಾಸದಲ್ಲಿ ಜಿಎಸ್ ಟಿ ಮಹತ್ವದ ತೆರಿಗೆ ಸುಧಾರಣಾ ಕ್ರಮವಾಗಲಿದೆ ಎಂದು ಹೇಳಿದ್ದಾರೆ. ಉತ್ಪಾದನೆ ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಕೆಲವು ರಾಜ್ಯಗಳು ಜಿಎಸ್ ಟಿ ಯಿಂದ ಗ್ರಾಹಕ ರಾಜ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು ತಮ್ಮ ರಾಜ್ಯಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿತ್ತು. ಇನ್ನು ಹಲವು ರಾಜ್ಯಗಳು ಪೆಟ್ರೋಲಿಯಂ ಉತ್ಪನ್ನ ಹಾಗು ಮದ್ಯ ಉತ್ಪನ್ನಗಳನ್ನು ಜಿಎಸ್ ಟಿ ಯಿಂದ ಹೊರಗಿಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದವು ಎಂದು ಅರುಣ್ ಜೇಟ್ಲಿ ಮಾಹಿತಿ ನೀಡಿದ್ದಾರೆ.
ಜಿಎಸ್ ಟಿ ಯಿಂದ ಮದ್ಯ ಉತ್ಪನ್ನಗಳನ್ನು ಹೊರಗಿಡಲಾಗಿದ್ದು, ಪೆಟ್ರೋಲಿಯಂ ಉತ್ಪನ್ನಗಳಿಗೆ ಜಿಎಸ್ ಟಿ ಮಸೂದೆಯಡಿ ಸಮಾನ ತೆರಿಗೆ ವಿಧಿಸಬಹುದಾಗಿದ್ದರೂ, ರಾಜ್ಯಗಳು ಇತರ ತೆರಿಗೆಗಳನ್ನು ವಿಧಿಸಬಹುದಾಗಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com