ವಶದಲ್ಲಿದ್ದ ದಲಿತ ವ್ಯಕ್ತಿ ಅನುಮಾನಾಸ್ಪದ ಸಾವು; ಠಾಣೆಯ ಇಡೀ ಪೊಲೀಸರು ಸಸ್ಪೆಂಡ್!

ಪೊಲೀಸ್ ವಶದಲ್ಲಿದ್ದ ದಲಿತ ವ್ಯಕ್ತಿಯೋರ್ವ ಸಾವನ್ನಪ್ಪಿದ ಪರಿಣಾಮ ಇಡೀ ಪೊಲೀಸ್ ಠಾಣೆಯ ಎಲ್ಲ ಪೊಲೀಸರನ್ನು ಅಮಾನುತು ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದಲ್ಲಿ ಲಾಕಪ್ ಡೆತ್ (ಸಂಗ್ರಹ ಚಿತ್ರ)
ಕಾನ್ಪುರದಲ್ಲಿ ಲಾಕಪ್ ಡೆತ್ (ಸಂಗ್ರಹ ಚಿತ್ರ)

ಕಾನ್ಪುರ: ಪೊಲೀಸ್ ವಶದಲ್ಲಿದ್ದ ದಲಿತ ವ್ಯಕ್ತಿಯೋರ್ವ ಸಾವನ್ನಪ್ಪಿದ ಪರಿಣಾಮ ಇಡೀ ಪೊಲೀಸ್ ಠಾಣೆಯ ಎಲ್ಲ ಪೊಲೀಸರನ್ನು ಅಮಾನುತು ಮಾಡಿರುವ ಘಟನೆ ಉತ್ತರ ಪ್ರದೇಶದ  ಕಾನ್ಪುರದಲ್ಲಿ ನಡೆದಿದೆ.

ಕಳ್ಳತನ ಪ್ರಕರಣ ಸಂಬಂಧ ಸ್ಥಳೀಯ ನಿವಾಸಿ ಕಮಲ್ ವಾಲ್ಮೀಕಿ (25 ವರ್ಷ) ಎಂಬಾತನನ್ನು ಎರಡು ದಿನಗಳು ಹಿಂದೆ ಕಾನ್ಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದರು. ಈ  ವೇಳೆ ಕಮಲ್ ವಾಲ್ಮೀಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪೊಲೀಸ್ ಠಾಣೆಯ ಲಾಕಪ್ ನಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಕಮಲ್ ವಾಲ್ಮೀಕಿ ಶವ ಪತ್ತೆಯಾಗಿದ್ದು, ಪ್ರಕರಣವನ್ನು  ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿಗಳು, ಠಾಣೆ ಇಡೀ 14 ಮಂದಿ ಪೊಲೀಸರನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ಓರ್ವ ಪೊಲೀಸ್ ಅಧಿಕಾರಿ ವಿರುದ್ಧ  ಕೊಲೆ ಪ್ರರಣವನ್ನು ಕೂಡ ದಾಖಲಿಸಿಕೊಂಡಿದ್ದಾರೆ.

ಈ ನಡುವೆ ಕಮಲ್ ವಾಲ್ಮೀಕಿ ಸಾವಿನ ಸಂಬಂಧ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿರುವ ಆತನ ಕುಟುಂಬಸ್ಥರು ಪೊಲೀಸರ ಅತಿಯಾದ ಹೊಡೆತಗಳಿಂದಾಗಿಯೇ ಕಮಲ್  ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಪ್ರಕರಣ ಬಯಲಾಗದಿರಲಿ ಎಂದು ಪೊಲೀಸರು ಕಮಲ್ ವಾಲ್ಮೀಕಿಯ ದೇಹವನ್ನು ಸುಳ್ಳು ಹೆಸರಿನಲ್ಲಿ ಮರಣೋತ್ತರ ಪರೀಕ್ಷೆಗೆ  ರವಾನಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಕುಟುಂಬಸ್ಥರ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು ಕಳ್ಳತನ ಪ್ರಕರಣ ಸಂಬಂಧ ರಾಜು ಎಂಬಾತನನ್ನು ವಶಕ್ಕೆ ಪಡೆದಿದ್ದೆವು. ಆದರೆ ಆತ ಠಾಣೆಯಲ್ಲೇ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಪ್ರಸ್ತುತ ಕಮಲ್ ವಾಲ್ಮೀಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರಿದಿ ಬಂದ ಬಳಿಕವಷ್ಟೇ ಮುಂದಿನ ಕ್ರಮ  ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್ ಉನಾದಲ್ಲಿ ನಡೆದ ದಲಿತರ ಮೇಲಿನ ಹಲ್ಲೆ ಪ್ರಕರಣ ಇಡೀ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗಿತ್ತು. ಈ ಪ್ರಕರಣ ಹಸಿರಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶ ಲಾಕಪ್ ಡೆತ್ ಪ್ರಕರಣ  ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com