ಮುಂಬೈ-ಗೋವಾ ಹೆದ್ದಾರಿ ಸೇತುವೆ ಕುಸಿತ: ಮತ್ತೆ ಏಳು ಮೃತದೇಹ ಪತ್ತೆ

ಮುಂಬೈ-ಗೋವಾ ಹೆದ್ದಾರಿಯ ಬ್ರಿಟೀಷ್ ಕಾಲದ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 21ಕ್ಕೇ ಏರಿಕೆಯಾಗಿದ್ದು,...
ಕುಸಿದುಬಿದ್ದ ಸೇತುವೆ
ಕುಸಿದುಬಿದ್ದ ಸೇತುವೆ
Updated on: 
ರಾಯ್ ಗಡ: ಮುಂಬೈ-ಗೋವಾ ಹೆದ್ದಾರಿಯ ಬ್ರಿಟೀಷ್ ಕಾಲದ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 21ಕ್ಕೇ ಏರಿಕೆಯಾಗಿದ್ದು, ಶುಕ್ರವಾರ ಮತ್ತೆ ಏಳು ಜನರ ಮೃತದೇಹ ಪತ್ತೆಯಾಗಿವೆ. ಇದರೊಂದಿಗೆ ಒಟ್ಟು 21 ಮೃತದೇಹಗಳನ್ನು ಹೊರ ತೆಗೆದಂತಾಗಿದೆ.
ಇಂದು ಪತ್ತೆಯಾದ ಏಳು ಮೃತದೇಹಗಳ ಗುರುತು ಪತ್ತೆಹಚ್ಚಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಅವರ ಕುಂಟುಂಬಗಳಿಗೆ ಒಪ್ಪಿಸಲಾಗಿದೆ.
ಕಳೆದ ಮಂಗಳವಾರ ತಡರಾತ್ರಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹಾಡ್‌ ಬಳಿ ಭಾರಿ ಮಳೆ ಮಳೆಯಿಂದಾಗಿ ಮುಂಬೈ-ಗೋವಾ ಹೆದ್ದಾರಿಯ ಬ್ರಿಟೀಷ್ ಕಾಲದ ಸೇತುವೆ ಕುಸಿದುಬಿದ್ದಿತ್ತು. ಈ ವೇಳೆ ಮಹರಾಷ್ಟ್ರ ಸಾರಿಗೆ ಸಂಸ್ಥೆಯ ಎರಡು ಬಸ್, ಒಂದು ತವೆರಾ, ಒಂದು ಹೋಂಡಾ ಸಿಟಿ ಕಾರು ಹಾಗೂ ಆಟೋವೊಂದು ಸಾವಿತ್ರಿ ನದಿಯಲ್ಲಿ ಕೊಚ್ಚಿ ಹೋಗಿದ್ದವು. ಈ ವಾಹನಗಳಲ್ಲಿ ಎಷ್ಟು ಜನರಿದ್ದರು ಎಂಬುದು ಇದುವರೆಗೂ ಖಚಿತ ಮಾಹಿತಿ ಇಲ್ಲ. ಆದರೆ ಕನಿಷ್ಠ 42 ಜನ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದು ರಾಯಗಡ ಜಿಲ್ಲಾಧಿಕಾರಿ ಸತಿಶ್ ವಾಗಲ್ ಅವರು ಹೇಳಿದ್ದಾರೆ.
ಕೊಚ್ಚಿ ಹೋದವರ ಪತ್ತೆಗಾಗಿ ಕಳೆದ 60 ಗಂಟೆಗಳಿಂದ ಭಾರಿ ಕಾರ್ಯಾಚರಣೆ ನಡೆಯುತ್ತಿದೆ. ಸರ್ಕಾರಿ ಬಸ್ ಗಳ ಶೋಧಕ್ಕಾಗಿ ಮಹಾರಾಷ್ಟ್ರ ಸರ್ಕಾರ ಮತ್ತು ಸ್ಥಳೀಯ  ಅಧಿಕಾರಿಗಳು ಬರೊಬ್ಬರಿ 300 ಕೆಜಿ ತೂಕದ ಬೃಹತ್ ಅಯಸ್ಕಾಂತವನ್ನು ನೀರಿಗಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com