ಸುನಂದಾ ಪುಷ್ಕರ್ ಮರಣೋತ್ತರ ಪರೀಕ್ಷೆ ನಡೆಯುವ ವೇಳೆ ತರೂರ್ ಏಮ್ಸ್ ನಲ್ಲಿದ್ದರು: ಸ್ವಾಮಿ

ಸುನಂದಾ ಪುಷ್ಕರ್ ಮರಣೋತ್ತರ ಪರೀಕ್ಷೆ ನಡೆಯುವ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ ಏಮ್ಸ್ ಆಸ್ಪತ್ರೆಯಲ್ಲಿದ್ದರು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್...
ಸುಬ್ರಮಣಿಯನ್ ಸ್ವಾಮಿ, ಸುನಂದಾ ಪುಷ್ಕರ್ ಮತ್ತು ಶಶಿ ತರೂರ್
ಸುಬ್ರಮಣಿಯನ್ ಸ್ವಾಮಿ, ಸುನಂದಾ ಪುಷ್ಕರ್ ಮತ್ತು ಶಶಿ ತರೂರ್
Updated on: 

ನವದೆಹಲಿ: ಸುನಂದಾ ಪುಷ್ಕರ್  ಮರಣೋತ್ತರ ಪರೀಕ್ಷೆ ನಡೆಯುವ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ ಏಮ್ಸ್ ಆಸ್ಪತ್ರೆಯಲ್ಲಿದ್ದರು ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.

ಸುನಂದಾ ಪುಷ್ಕರ್ ಸಾವಿಗೂ ಶಶಿ ತರೂರ್ ಗೂ ಸಂಬಂಧವಿದ್ದು, ಜನವರಿ 18 2014 ರಂದು ಶಶಿ ತರೂರ್  ಏಮ್ಸ್ ಆಸ್ಪತ್ರೆಯಲ್ಲಿದ್ದರು. ಈ ವೇಳೆ ಸುನಂದಾ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿತ್ತು ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಏಮ್ಸ್ ನಲ್ಲಿ ತರೂರ್ ದಾಖಲಾಗಿದ್ದರು, ಅಂದೇ ಸುನಂದಾ ಅವರದ್ದು ಸ್ವಾಭಾವಿಕ ಸಾವು ಎಂದು ವರದಿ ಬಂತು ಎಂದು ಹೇಳಿದ್ದಾರೆ, ಈ ವರದಿಯ ಹಿಂದೆ ತರೂರ್ ಕೈವಾಡವಿದೆ ಎಂದು ಅವರು ಪರೋಕ್ಷವಾಗಿ ಆರೋಪಿಸಿದ್ದಾರೆ. ಸುನಂದಾ ಪುಷ್ಕರಾ ಸಾವಿನ ತನಿಖೆಯನ್ನು ಶೀಘ್ರವಾಗಿ ಮುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

2014ರ ಜನವರಿಯಲ್ಲಿ ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢವಾಗಿ ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸುನಂದಾ ದೇಹದಲ್ಲಿ ಅಪಾಯಕಾರಿ ವಿಷವಿತ್ತು ಎಂದು ಹೇಳಲಾಗಿತ್ತು, ನಂತರ ಅದರ ಪರೀಕ್ಷೆಗಾಗಿ ಸುನಂದಾ ಅಂಗವನ್ನು ವಾಷಿಂಗ್ಟನ್ ಗೆ ಕಳುಹಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com