ಬ್ರಿಕ್ಸ್ ಸಮ್ಮೇಳನ: ಗೋವಾ ಸಿಎಂ ಅವರನ್ನು ಭೇಟಿ ಮಾಡಲಿರುವ ಚೀನಾ ವಿದೇಶಾಂಗ ಸಚಿವ

ಆಗಸ್ಟ್ 12 ರಂದು ಭಾರತಕ್ಕೆ ಆಗಮಿಸಲಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಗೋವಾ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಬ್ರಿಕ್ಸ್ ಸಮ್ಮೇಳನದ ಬಗ್ಗೆ ಚರ್ಚಿಸಲಿದ್ದಾರೆ.
ಬ್ರಿಕ್ಸ್ ಸಮ್ಮೇಳನ: ಗೋವಾ ಸಿಎಂ ಅವರನ್ನು ಭೇಟಿ ಮಾಡಲಿರುವ ಚೀನಾ ವಿದೇಶಾಂಗ ಸಚಿವ

ಪಣಜಿ: ಆಗಸ್ಟ್ 12 ರಂದು ಭಾರತಕ್ಕೆ ಆಗಮಿಸಲಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಗೋವಾ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಬ್ರಿಕ್ಸ್ ಸಮ್ಮೇಳನದ ಬಗ್ಗೆ ಚರ್ಚಿಸಲಿದ್ದಾರೆ. ಅಕ್ಟೊಬರ್ ನಲ್ಲಿ ನಡೆಯಲಿರುವ 8ನೇ  ಬ್ರಿಕ್ಸ್ ಸಮ್ಮೇಳನವನ್ನು ಗೋವಾ ಸರ್ಕಾರ ಆಯೋಜಿಸುತ್ತಿದ್ದು, ಈ ಬಗ್ಗೆ ಗೋವಾ ಸಿಎಂ ಲಕ್ಷ್ಮಿ ಕಾಂತ್ ಪರ್ಸೆಕರ್ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.  ಭದ್ರತೆಯನ್ನು ಪರಿಶೀಲಿಸಲು ಚೀನಾದ ವಿದೇಶಾಂಗ ಸಚಿವರು ಗೋವಾಗೆ ಆಗಮಿಸುತ್ತಿದ್ದಾರೆ ಎಂದು ಗೋವಾ ಸಿಎಂ ಲಕ್ಷ್ಮಿಕಾಂತ್ ಪರ್ಸೆಕರ್ ತಿಳಿಸಿದ್ದಾರೆ.

ಬ್ರಿಕ್ಸ್ ಸಮ್ಮೇಳನದಲ್ಲಿ ಚೀನಾದ ಅಧ್ಯಕ್ಷರು ಭಾಗಿಯಾಗಲಿದ್ದು ಗೋವಾದಲ್ಲಿ ಸಿದ್ಧತೆ ಭರದಿಂದ ಸಾಗಿದ್ದು, ಚೀನಾ ವಿದೇಶಾಂಗ ಸಚಿವ ಗೋವಾದ ರಾಜ್ಯಪಾಲರನ್ನು ಸಹ ಭೇಟಿ ಮಾಡಲಿದ್ದಾರೆ. ಆಗಸ್ಟ್.13 ರಂದು ಚೀನಾದ ವಿದೇಶಾಂಗ ಸಚಿವರು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com