'ರಾಮ ರಾಜ್ಯ ಸ್ಥಾಪಿಸುವಂತೆ ಆದೇಶ ನೀಡುವುದು ಅಸಾಧ್ಯ': ಸುಪ್ರೀಂ

ಕೆಲ ವಿಚಾರಗಳಲ್ಲಿ ಸೀಮಿತ ಸಾಮರ್ಥ್ಯವಿದ್ದು, ದೇಶದಲ್ಲಿ ರಾಮ ರಾಜ್ಯ ಸ್ಥಾಪಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಶನಿವಾರ ಸ್ಪಷ್ಟಪಡಿಸಿದೆ...
ಸರ್ವೋಚ್ಛ ನ್ಯಾಯಾಲಯ (ಸಂಗ್ರಹ ಚಿತ್ರ)
ಸರ್ವೋಚ್ಛ ನ್ಯಾಯಾಲಯ (ಸಂಗ್ರಹ ಚಿತ್ರ)

ನವದೆಹಲಿ: ಕೆಲ ವಿಚಾರಗಳಲ್ಲಿ ಸೀಮಿತ ಸಾಮರ್ಥ್ಯವಿದ್ದು, ದೇಶದಲ್ಲಿ ರಾಮ ರಾಜ್ಯ ಸ್ಥಾಪಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಶನಿವಾರ ಸ್ಪಷ್ಟಪಡಿಸಿದೆ.

ನಮ್ಮ ಆದೇಶ ನಿರ್ದೇಶನವಿದ್ದರೆ ಎಲ್ಲವೂ ನಡೆಯುತ್ತದೆ ಎಂದುಕೊಳ್ಳುತ್ತೀದ್ದೀರಾ? ನಾವು ಒಂದು ಆದೇಶ ನೀಡಿದರೆ ದೇಶದಲ್ಲಿರುವ ಭ್ರಷ್ಟಾಚಾರವೆಲ್ಲವೂ ತೊಲಗಿ ಹೋಗುತ್ತದೆ ಎಂದು ಭಾವಿಸಿದ್ದೀರಾ? ಆದೇಶ ನೀಡಿದ ಕೂಡಲೇ ರಾಮ ರಾಜ್ಯ ಸ್ಥಾಪನೆಯಾಗುತ್ತದೆ ಎಂದು ತಿಳಿದಿದ್ದೀರಾ? ನಾವು ಅಂದುಕೊಂಡಂತೆ ಯಾವುದೂ ಆಗುವುದಿಲ್ಲ ಎಂದು ನ್ಯಾಯಮೂರ್ಥಿ ಟಿ.ಎಸ್. ಠಾಕೂರ್ ಅವರು ಹೇಳಿದ್ದಾರೆ.

ಹೀಗೆಂದು ರಸ್ತೆ ಮತ್ತು ಪಾದಚಾರಿ ಮಾರ್ಗ ಒತ್ತುವರಿ ಕುರಿತ ಅರ್ಜಿಯೊಂದನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಮೂರ್ತಿ ಠಾಕೂರ್ ನೇತೃತ್ವದ ಪೀಠ ಹೇಳಿದೆ.

ಸಾಕಷ್ಟು ಬಾರಿ ಹಲವು ಕೆಲಸಗಳನ್ನು ಮಾಡಬೇಕೆಂದು ನಾವು ಇಚ್ಛಿಸುತ್ತೇವೆ. ಆದರೆ, ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ಸಾಮರ್ಥ್ಯ ಸೀಮಿತಕ್ಕೊಳಗಾಗಿದ್ದು, ಅದೇ ದೊಡ್ಡ ಸಮಸ್ಯೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರಿದ್ದ ಪೀಠ ಹೇಳಿದೆ.

ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಬಾರದು. ನ್ಯಾಯಾಲಯವೇ ಈ ಬಗ್ಗೆ ನಿರ್ದೇಶನ ನೀಡದಿದ್ದರೆ. ಬೇರೆ ಯಾರು ನೀಡುತ್ತಾರೆಂದು ಅರ್ಜಿ ಸಲ್ಲಿಸಿದ್ದ ಎನ್ ಜಿಒ ಸಂಸ್ಥೆಯೊಂದು ವಾದ ಮಂಡಿಸಿತ್ತು. ರಾಜಧಾನಿ ದೆಹಲಿಯಲ್ಲಿ ಅಷ್ಟೇ ಅಲ್ಲದೆ ದೇಶದ ವಿವಿಧೆ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿತ್ತು.

ಈ ವೇಳೆ ಅರ್ಜಿ ತಿರಸ್ಕರಿಸುವುದಾಗಿ ಹೇಳಿದ ಪೀಠವು, ದೇಶದಲ್ಲಿ ಯಾವುದೂ ಸರಿ ಇಲ್ಲ ಎಂದು ಭಾವಿಸುವಂತಿಲ್ಲ. ಮೊದಲು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿತು. ಇದಕ್ಕೆ ಉತ್ತರಿಸಿದ ಎನ್ ಜಿಒ, ಇಷ್ಟು ನ್ಯಾಯಾಲಯವೆಂದು ಹೋಗುವುದು. ದೇಶದಲ್ಲಿ ಕಾನೂನು ನಿಯಮ ಎಲ್ಲಿದೆ? ಸಾಕಷ್ಟು ನಂಬಿಕೆಯೊಂದಿಗೆ ಇಲ್ಲಿಗೆ ಬಂದಿದ್ದೇನೆ. 2014 ರಲ್ಲಿ ಇದೇ ಸುಪ್ರೀಂ ನ್ಯಾಯಾಲಯ ಸಂಬಂಧ ಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುತ್ತಾರೆಂದು ಹೇಳಿತ್ತು. ಆದರೆ, ಅಧಿಕಾರಿಗಳು ಈವರೆಗೂ ಏನನ್ನೂ ಮಾಡಿಲ್ಲ.

ಇದಕ್ಕುತ್ತರಿಸಿದ ನ್ಯಾಯಾಲಯ, ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿತು. ನಂತರ ಅರ್ಜಿದಾರರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಬೇಕು ಎಂದು ಪಟ್ಟು ಹಿಡಿದರು. ಆರಂಭದಲ್ಲಿ ಅರ್ಜಿಯನ್ನು ವಜಾ ಮಾಡುವುದಾಗಿ ತಿಳಿಸಿದ್ದ ಪೀಠವು, ನಂತರ ಮುಂದಿನ ವರ್ಷ ಫೆಬ್ರವರಿ ತಿಂಗಳಿನಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿ ಅರ್ಜಿಯ ವಿಚಾರಣೆಯನ್ನು ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com