

ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಪುತ್ರಿಯ ವಿವಾಹಕ್ಕೆ ಆಗಮಿಸುವ ಗಣ್ಯರಿಗಾಗಿ 50 ವಿಮಾನಗಳಲ್ಲಿನ ಟಿಕೆಟ್ ಗಳನ್ನು ಕಾಯ್ದಿರಿಸಿದ್ದಾರೆ.
ಡಿಸೆಂಬರ್ 3 ಮತ್ತು 4ನೇ ತಾರೀಖಿಗೆ ನಾಗ್ಪುರಕ್ಕೆ ಹೋಗುವ ವಿಮಾನಗಳ ಟಿಕೆಟ್ ಗಳನ್ನು ಕಾಯ್ದಿರಿಸಲಾಗಿದ್ದು ಇತರ ಯಾವುದೇ ಪ್ರಯಾಣಿಕರಿಗೆ ಸೀಟು ಸಿಗದಂತಾಗಿದೆ.
ನಾಗ್ಪುರದ ವಾದ್ರಾ ರಸ್ತೆಯಲ್ಲಿರುವ ರಾಣಿ ಕೋಟಿಯಲ್ಲಿ ಡಿಸೆಂಬರ್ 3ನೇ ತಾರೀಖು ಗಡ್ಕರಿ ಪುತ್ರಿ ಕೇತ್ಕಿ ಮದುವೆ ನಡೆಯಲಿದ್ದು 10 ಸಾವಿರ ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ.
ನಾಗ್ಪುರದ ಆದಿತ್ಯ ಎಂಬುವರನ್ನು ಕೇತ್ಕಿ ವಿವಾಹವಾಗಲಿದ್ದು, ಆದಿತ್ಯ ಅಮೆರಿಕದಲ್ಲಿ ಫೇಸ್ ಬುಕ್ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.