ನೋಟು ರದ್ದತಿ ಬಳಿಕ ಸಂತಾನ ಹರಣ ಕಾಯ್ದೆ ಮಾಡಬೇಕಾದ ಅಗತ್ಯವಿದೆ: ಗಿರಿರಾಜ್ ಸಿಂಗ್

ನೋಟು ರದ್ದತಿ ಬಳಿಕ ಸಂತಾನ ಹರಣ ಕಾಯ್ದೆ ಮಾಡಬೇಕಾದ ತುರ್ತು ಅಗತ್ಯವಿದೆಯೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...
ಗಿರಿರಾಜ್ ಸಿಂಗ್
ಗಿರಿರಾಜ್ ಸಿಂಗ್
Updated on
ಪಾಟ್ನಾ: ನೋಟು ರದ್ದತಿ ಬಳಿಕ ಸಂತಾನ ಹರಣ ಕಾಯ್ದೆ ಮಾಡಬೇಕಾದ ತುರ್ತು ಅಗತ್ಯವಿದೆಯೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 
ಸಮಾರಂಭವೊಂದರಲ್ಲಿ ಮಾತನಾಡಿದ ಸಣ್ಣ ಮತ್ತು ಮಧ್ಯಮ ಕೈಗಾರಿಕ ಸಹಾಯ ಸಚಿವ ಗಿರಿರಾಜ್ ಸಿಂಗ್ ದೇಶದಲ್ಲಿ ಜನಸಂಖ್ಯೆ ಭಾರೀ ಹೆಚ್ಚಳವಾಗುತ್ತಿದ್ದು ಅಭಿವೃದ್ಧಿಗೆ ಅಡ್ಡಿಯಾಗಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಸಂತಾನ ಹರಣ ಸಹಿತ ಬಲವಾದ ಜನಸಂಖ್ಯಾ ನಿಯಂತ್ರಣ ಅಗತ್ಯವಿದೆ ಎಂದು ಹೇಳಿದ್ದಾರೆ. 
ಕಳೆದ ವಾರ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಸಂಜಯ್ ಪಾಸ್ಪನ್ ಸಂತಾನ ಹರಣದಿಂದ ದೇಶದ ಜನಸಂಖ್ಯೆಯನ್ನು ತಡೆಯಬಹುದು ಎಂದು ಹೇಳಿದ್ದು ಇದನ್ನು ಗಿರಿರಾಜ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com