ಚೊ ರಾಮಸ್ವಾಮಿ ನನ್ನನ್ನು ಸಾವಿನ ವ್ಯಾಪಾರಿ ಎಂದು ಪರಿಚಯಿಸಿದ್ದರು: ಮೋದಿ

ಪತ್ರಕರ್ತ, ರಾಜಕೀಯ ವಿಶ್ಲೇಷಕ, ಹಾಸ್ಯ ನಟ, ಚೋ ರಾಮಸ್ವಾಮಿ ನಿಧನಕ್ಕೆ ಪ್ರಧಾನ ಮಂತ್ರಿ...
ಚೊ ರಾಮಸ್ವಾಮಿ
ಚೊ ರಾಮಸ್ವಾಮಿ
Updated on: 
ನವದೆಹಲಿ: ಪತ್ರಕರ್ತ, ರಾಜಕೀಯ ವಿಶ್ಲೇಷಕ ಚೋ ರಾಮಸ್ವಾಮಿ ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 
ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಆತ್ಮೀಯ ಸ್ನೇಹಿತ ಚೊ ರಾಮಸ್ವಾಮಿಯವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಬಹು ಆಯಾಮದ ವ್ಯಕ್ತಿತ್ವದ, ಬೌದ್ಧಿಕ, ಮಹಾನ್ ರಾಷ್ಟ್ರೀಯತಾವಾದಿ ಮತ್ತು ನಿರ್ಭೀತದಿಂದ ಯಾವುದೇ ವಿಷಯಗಳನ್ನು ಹೇಳುತ್ತಿದ್ದ ರಾಮಸ್ವಾಮಿಯವರನ್ನು ಎಲ್ಲರೂ ಗೌರವಿಸುತ್ತಿದ್ದರು ಮತ್ತು ಶ್ಲಾಘಿಸುತ್ತಿದ್ದರು ಎಂದಿದ್ದಾರೆ.
ನಂತರ ಅವರು ಚೆನ್ನೈಯಲ್ಲಿ ಭಾಗವಹಿಸಿದ್ದ ಎರಡು ಕಾರ್ಯಕ್ರಮಗಳ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮೋದಿಯವರು ಹೀಗೆ ಹೇಳಿದ್ದಾರೆ, ಸಿಡುಕಿನ ಚೊ ರಾಮಸ್ವಾಮಿಯವರು ನನ್ನನ್ನು ಸಾವಿನ ವ್ಯಾಪಾರಿ ಎಂದು ಪರಿಚಯಿಸಿದ್ದಾರೆ. ಈ ಸ್ಮರಣೀಯ ಸಂವಾದವನ್ನು ನೋಡಿ ಎಂದು ಮೋದಿಯವರು ಟ್ವೀಟ್ ಮಾಡಿದ್ದು, ಇನ್ನೊಂದು ಟ್ವೀಟ್ ನಲ್ಲಿ, ನಾನು ಅವರ ಹೇಳಿಕೆಗೆ ಉತ್ತರಿಸಿದ್ದೇನೆ, ಆದರೆ ಚೊ ಅವರ ವಾಕ್ಚಾತುರ್ಯಕ್ಕೆ ನನ್ನ ಮಾತು ಹೊಂದಿಕೆಯಾಗುವುದಿಲ್ಲ, ಇಲ್ಲಿ ಅವರ ಬಗ್ಗೆ ನಾನು ಹೇಳಿರುವುದು ಇದೆ ಎಂದು ಯೂಟ್ಯೂಬ್ ನ ಲಿಂಕ್ ಹಾಕಿದ್ದಾರೆ. 
ರಾಮಸ್ವಾಮಿಯವರಿಗೆ ದೇಶದ ಹಲವು ರಾಜಕಾರಣಿಗಳೊಂದಿಗೆ ವೈಯಕ್ತಿಕ ಒಡನಾಟವಿತ್ತು. ಈ ವರ್ಷದ ಆರಂಭದಲ್ಲಿ ಅಸೌಖ್ಯಕ್ಕೊಳಗಾಗಿದ್ದ ರಾಮಸ್ವಾಮಿಯವರ ಆರೋಗ್ಯವನ್ನು ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ವಿಚಾರಿಸಿದ್ದರು. 
ರಾಜಕೀಯ ಮ್ಯಾಗಜಿನ್ ತುಘಲಕ್ ನ ಸ್ಥಾಪಕರು ಮತ್ತು ಸಂಪಾದಕರಾಗಿದ್ದ ರಾಮಸ್ವಾಮಿ ಆಡಳಿತಾರೂಢ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ನಿರ್ಭೀತಿಯಿಂದ ಟೀಕಿಸುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com