ಇಂದು ವಿಧಾನಸಭೆಯಲ್ಲಿ ಭದ್ರತಾ ಸಿಬ್ಬಂದಿ ಮಹಿಳೆಯರ ಹಾಗೂ ಬಾಲಕಿಯರ ಸ್ಕಾರ್ಪ್ ತೆಗೆಸುವ ವಿಷಯದ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪಾಂಡಾ ಅವರು, ಡಿಸೆಂಬರ್ 4ರಂದು ಸುಂದರಗಢ್ ಜಿಲ್ಲೆಯಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಆಗಮಿಸಿದ ಮಹಿಳೆಯೊಬ್ಬರಿಗೆ ಕಪ್ಪು ಬಣ್ಣದ ಒಳ ಉಡುಪು ಬಿಚ್ಚುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಆ ಮಹಿಳೆಗೆ ತನ್ನ ಕಪ್ಪು ಬಣ್ಣದ ಪೆಟಿಕೋಟ್ ಸಹ ತೆಗೆಯುವಂತೆ ಹೇಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.