ಶ್ರೀನಗರದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಸರತ್ ಅಲಂ, ಪಾಕಿಸ್ತಾನದ ದ್ವಜ ಹಾರಿಸಿ ವಿವಾದಕ್ಕೀಡಾಗುವುದರ ಜತೆಗೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಜುಗರಕ್ಕೀಡಾಗಿತ್ತಲ್ಲದೇ ಈ ಬಗ್ಗೆ ವರದಿ ನೀಡುವುದರ ಜತೆಗೆ ಅಲಂ ನನ್ನು ಜೈಲಿಗಟ್ಟುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಅವರಿಗೆ ಕಠಿಣ ಸಂದೇಶ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಮಸರತ್ ಅಲಂನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.