

ಮುಂಬಯಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮುಂಬಯಿ ಕಸ್ಟಮ್ಸ್ ಅಧಿಕಾರಿಗಳು 69 ಲಕ್ಷ ರು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ದಿ ಏರ್ ಇಂಟಲಿಜೆಂಟ್ಸ್ ಯುನಿಟ್ ಅಧಿಕಾರಿಗಳು ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ನಾಲ್ವರನ್ನ ಬಂಧಿಸಿದ್ದಾರೆ. ಜೊತೆಗೆ ಅವರ ಬಳಿಯಿಂದ 2,000 ಮುಖಬೆಲೆಯ 25 ಲಕ್ಷ ರು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಮತ್ತೊಂದು ಪ್ರಕರಣದಲ್ಲಿ ಹೈದರಾಬಾದಿನಿಂದ ಬರುತ್ತಿದ್ದ ಮೂವರು ಪ್ರಯಾಣಿಕರಿಂದ 43 ಲಕ್ಷ ವಿದೇಶಿ ಕರೆನ್ಸಿ ಜಪ್ತಿ ಮಾಡಿದ್ದಾರೆ. ಶೇಕ್ ವಾಹಿದ್ ಅಲಿ, ಮೊಹಮದ್ ಸೊಹೈಲ್ ಮತ್ತು ಶೇಕ್ ಪಾಶಾ ಎಂಬುವರ ಬಳಿಯಿಂದ ಸೌದಿ ರಿಯಾಲ್ಸ್, ಅರೇಬಿಯನ್ ದಿರ್ ಹಾಮ್ಸ್ ಹಾಗೂ ಆಸ್ಟ್ರೇಲಿಯನ್ ಡಾಲರ್ಸ್ ವಶ ಪಡಿಸಿಕೊಳ್ಳಲಾಗಿದೆ.
ನ್ಯೂಸ್ ಪೇಪರ್ ನೊಳಗೆ ಕರೆನ್ಸಿ ಇಟ್ಟು ತಮ್ಮ ಲಗೇಜ್ ಬ್ಯಾಗ್ ನಲ್ಲಿ ಸಾಗಿಸುತ್ತಿದ್ದರು. ತಾವು ಕಳೆದ ವಾರ ಸೌದಿಯಿಂದ ಬಂದಿದ್ದು, ಕರೆನ್ಸಿ ಬದಲಾಯಿಸಲು ಮುಂಬಯಿಗೆ ಬರುತ್ತಿದ್ದುದಾಗಿ ತಿಳಿಸಿದ್ದಾರೆ. ಈ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.