

ತಿರುವನಂತಪುರಂ: ತಿರುವನಂತರಪುರದಲ್ಲಿ ನಡೆದಿರುವ ಗುಂಪು ಘರ್ಷಣೆಯೊಂದರಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗುವಂತೆ ಹೊಡೆದಿರುವ ಘಟನೆ ನಡೆದಿದ್ದು, ಹೊಡೆದಾಟ ದೃಶ್ಯವೀಗ ಪೊಲೀಸರ ಕೈ ಸೇರಿದೆ.
ಘಟನೆ ಭಾನುವಾರ ತಿರುವನಂತಪುರಂನ ರೈಲ್ವೆ ನಿಲ್ದಾಣದ ಮುಖ್ಯರಸ್ತೆಯಲ್ಲಿ ನಡೆದಿದ್ದು. ಹೊಡೆದಾಟ ದೃಶ್ಯವನ್ನು ಅನಾಮಿಕ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ ಪೊಲೀಸರಿಗೆ ನೀಡಿದ್ದಾರೆ. ದೃಶ್ಯವನ್ನು ಸೆರೆಹಿಡಿದಿರುವ ವ್ಯಕ್ತಿಯ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಆದರೆ, ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಶಬೀರ್ ಎಂದು ಹೇಳಲಾಗುತ್ತಿದ್ದು, ವ್ಯಕ್ತಿಯ ಮೇಲೆ ಹಲ್ಲೆ ಮಾಡುತ್ತಿರುವುದನ್ನು ನೋಡಿರುವ ಅಲ್ಲಿನ ಸ್ಥಳೀಯರು ಕೂಗಾಡಿದ್ದಾರೆ. ಇದನ್ನು ನೋಡಿದ ಹಲ್ಲೆ ಮಾಡುತ್ತಿದ್ದ ಗುಂಪು ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಶಬೀರ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೂ ಅಷ್ಟರಲ್ಲಾಗಲೇ ಶಬೀರ್ ಸಾವನ್ನಪ್ಪಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಬೀರ್ ಮೇಲೆ ದಾಳಿ ಮಾಡಿದ ದೃಶ್ಯವೀಗ ಪೊಲೀಸ ಕೈ ಸೇರಿದ್ದು, ವಿಡಿಯೋದಲ್ಲಿ ಹಲ್ಲೆ ಮಾಡಿದ ನಾಲ್ವರನ್ನು ಪೊಲೀಸರು ಈಗಾಗಲೇ ಬಂಧನಕ್ಕೊಳಪಡಿಸಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡುತ್ತಿದ್ದು, ಈಗಾಗಲೇ ಈ ವಿಡಿಯೋವನ್ನು 6 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.