ದಲಿತ, ಒಬಿಸಿ ಮೀಸಲು ರದ್ದಿಲ್ಲ: ಪ್ರಧಾನಿ ಮೋದಿ

ದಲಿತರನ್ನು ತಪ್ಪುದಾರಿಗೆಳೆಯಲು ಹಾಗೂ ಮೂರ್ಖರನ್ನಾಗಿಸಲು ದೊಡ್ಡ ಸುಳ್ಳಿನ ಅಭಿಯಾನವನ್ನೇ ನಡೆಸಲಾಗುತ್ತಿದೆ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on: 
ಕೊಯಮತ್ತೂರು: ದಲಿತರನ್ನು ತಪ್ಪುದಾರಿಗೆಳೆಯಲು ಹಾಗೂ ಮೂರ್ಖರನ್ನಾಗಿಸಲು ದೊಡ್ಡ ಸುಳ್ಳಿನ ಅಭಿಯಾನವನ್ನೇ ನಡೆಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದ್ದಾರೆ. 
ಕೊಯಮತ್ತೂರಿನಲ್ಲಿ ಮಂಗಳವಾರ ಮಾತನಾಡಿದ ಮೋದಿ, ಹಿಂದೆ ಅವರು ನನ್ನ ವಿರುದ್ಧ ರೈತರನ್ನು ಎತ್ತಿಕಟ್ಟಲು ನೋಡಿದರು. ಅದರಲ್ಲಿ ವಿಫಲರಾದರು. ಈಗ ದಲಿತರ ಹೆಸರಲ್ಲಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದಾರೆ. ಅವರು ಎಲ್ಲೇ ಹೋದರೂ, ಯಾವಾಗ ಹೋದರೂ ಹೇಳುವುದು ಸುಳ್ಳೇ. ದೇಶವನ್ನು ವಿಭಜಿಸುವ ಸಲುವಾಗಿ ಇಂತಹ ಸುಳ್ಳಿನ ಸರಮಾಲೆಗಳನ್ನು ಕಟ್ಟುತ್ತಿದ್ದಾರೆ. ಆದರೆ, ನಾನು ಇದಕ್ಕೆಲ್ಲ ಬಗ್ಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
ಜತೆಗೆ, ದಲಿತರು, ಒಬಿಸಿಗಳಿಗಿರುವ ಮೀಸಲನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ ಎಂದ ಅವರು, ದಲಿತರನ್ನು ಮುಂದಿಟ್ಟುಕೊಂಡು ಉದ್ದೇಶಪೂರ್ವಕವಾಗಿ ಸಂಚು ರೂಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 
ದಲಿತರ ಪರವಾಗಿ ನಾನು ಕೆಲಸ ಮಾಡುತ್ತಿರುವುದರಿಂದ ದಲಿತರು ನನ್ನ ಹಿಂದೆ ಇದ್ದಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ವಿರೋಧ ಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. 
ರೋಹಿತ್ ವೆಮುಲ ಪ್ರಕರಣದ ನಂತರ ಎರಡು ಬಾರಿ ಹೈದ್ರಾಬಾದ್ ವಿವಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿಯ ಈ ಹೇಳಿಕೆ ಮಹತ್ವ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com