ಭಾರತೀಯ ಸೇನೆಯಿಂದ ಗೂಢಚಾರಿ ನೇಮಕಕ್ಕೆ ಸೂಚಿಸಿದ್ದ ಲಷ್ಕರ್: ಹೆಡ್ಲಿ ಸ್ಫೋಟಕ ಮಾಹಿತಿ

ಭಾರತೀಯ ಸೇನೆಯಿಂದ ಗೂಢಾಚಾರಿಯಾಗಿ ಓರ್ವನನ್ನು ನೇಮಕ ಮಾಡಿಕೊಳ್ಳುವಂತೆ ಲಷ್ಕರ್ ಇ ತೊಬ್ಯಾ ಸಂಘಟನೆ ಸೂಚನೆ ನೀಡಿತ್ತು ಎಂದು ಪಾಕಿಸ್ತಾನ-ಅಮೆರಿಕ ಉಗ್ರ ಹಾಗೂ 26/11ರ ಮುಂಬೈ ದಾಳಿಯ ಪ್ರಮುಖ...
ಭಾರತೀಯ ಸೇನೆಯಿಂದ ಗೂಢಚಾರಿ ನೇಮಕಕ್ಕೆ ಸೂಚಿಸಿದ್ದ ಲಷ್ಕರ್: ಹೆಡ್ಲಿ ಸ್ಫೋಟಕ ಮಾಹಿತಿ (ಸಾಂದರ್ಭಿಕ  ಚಿತ್ರ)
ಭಾರತೀಯ ಸೇನೆಯಿಂದ ಗೂಢಚಾರಿ ನೇಮಕಕ್ಕೆ ಸೂಚಿಸಿದ್ದ ಲಷ್ಕರ್: ಹೆಡ್ಲಿ ಸ್ಫೋಟಕ ಮಾಹಿತಿ (ಸಾಂದರ್ಭಿಕ ಚಿತ್ರ)

ನವದೆಹಲಿ: ಭಾರತೀಯ ಸೇನೆಯಿಂದ ಗೂಢಾಚಾರಿಯಾಗಿ ಓರ್ವನನ್ನು ನೇಮಕ ಮಾಡಿಕೊಳ್ಳುವಂತೆ ಲಷ್ಕರ್ ಇ ತೊಬ್ಯಾ ಸಂಘಟನೆ ಸೂಚನೆ ನೀಡಿತ್ತು ಎಂದು ಪಾಕಿಸ್ತಾನ-ಅಮೆರಿಕ ಉಗ್ರ ಹಾಗೂ 26/11ರ ಮುಂಬೈ ದಾಳಿಯ ಪ್ರಮುಖ ರುವಾರಿ ಡೇವಿಡ್ ಕೋಲ್‌ಮನ್ ಹೆಡ್ಲಿ ಸ್ಫೋಟಕ ಮಾಹಿತಿಯೊಂದನ್ನು ಸೋಮವಾರ ನಡೆದ ವಿಚಾರಣೆ ವೇಳೆ ಹೊರಹಾಕಿದ್ದಾನೆ.

ಪ್ರಸ್ತುತ ಅಮೆರಿಕದ ಸೆರೆವಾಸದಲ್ಲಿರುವ ಹೆಡ್ಲಿಯನ್ನು ನಿನ್ನೆಯಷ್ಟೇ ಮುಂಬಯಿನ ಟಾಡಾ ವಿಶೇಷ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಪಡಿಸಿತ್ತು. ಈ ಸಂದರ್ಭದಲ್ಲಿ ನ್ಯಾಯಾಧೀಶ ಜಿ.ಕೆ.ಸನಪ್ ಅವರ ಮುಂದೆ ಉಗ್ರ ಹೆಡ್ಲಿ ಮುಂಬೈ ದಾಳಿವೇಳೆ ನಡೆದ ಪ್ರತಿಯೊಂದು ವಿಷಯಗಳನ್ನು ವಿವರಿಸಿದ್ದಾನೆ.

ಮುಂಬೈ ದಾಳಿ ಕುರಿತಂತೆ ಪ್ರಮುಖ ವಿಚಾರಗಳನ್ನು ಬಾಯ್ಬಿಟ್ಟಿರುವ ಹೆಡ್ಲಿ ದಾಳಿ ನಡೆಸುವುದಕ್ಕೂ ಮುನ್ನ ಲಷ್ಕರ್-ಇ-ತೊಯ್ಬೊ ಸಂಘಟನೆಯ ನಾಯಕರು ಉಗ್ರರನ್ನು ಒಂದೆಡೆ ಸೇರಿಸಿ ನಂತರ ಭಾರತೀಯ ಸೇನೆಯಲ್ಲೊಬ್ಬರನ್ನು ಗೂಢಾಚಾರಿಯಾಗಿ ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು ಎಂದು ಹೇಳಿದ್ದಾನೆ. ಅಲ್ಲದೆ, ಎಲ್ಇಟಿ ಸಂಘಟನೆಯನ್ನು ನಿರ್ಣಾಮ ಮಾಡುವ ಹಾಗೂ ನಿಷೇಧಿಸುವ ಅಮೆರಿಕ ಸರ್ಕಾರಕ್ಕೆ ಸವಾಲು ಹಾಕುವಂತೆ ಹಫೀಜ್ ಸಯ್ಯೀದ್ ಹಾಗೂ ಝಕಿವುರ್ ರೆಹಮಾನ್ ಲಖ್ವಿಗೆ ನಾನು ಸಲಹೆಯನ್ನು ನೀಡಿದ್ದೆ ಎಂದು ಹೇಳಿದ್ದಾನೆ.

ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿರುವುದಾಗಿ ನನ್ನ ಬಗ್ಗೆ ಮಾಹಿತಿ ತಿಳಿದ ಪತ್ನಿ 2008ರ ಜನವರಿಯಲ್ಲಿ ಇಸ್ಲಾಮಾಬಾದ್ ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗೆಗೆ ಮಾಹಿತಿ ನೀಡಿಬಿಟ್ಟಿದ್ದಳು.

ಎಲ್ ಇಟಿ, ಜೈಷ್-ಇ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಹಾಗೂ ಹರ್ಕತ್-ಉಲ್-ಮುಜಾಹಿದ್ದೀನ್ ಸಂಘಟನೆಗಳು ಈಗಾಗಲೇ ಒಂದುಗೂಡಿದ್ದು, ಯುನೈಟೆಡ್ ಜೆಹಾದಿ ಕೌನ್ಸಿಲ್'ವೊಂದನ್ನು ರಚಿಸಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದ್ದಾನೆ. ಅಲ್ಲದೆ, ಮುಂಬೈನ ತಾಜ್ ಹೋಟೆಲ್ ನಲ್ಲಿ ನಡೆಯಲಿರುವ ಭಾರತೀಯ ರಕ್ಷಣಾ ವಿಜ್ಞಾನಿಗಳ ಸಭೆಯ ಮೇಲೂ ದಾಳಿ ನಡೆಸಲು ಎಲ್ಇಟಿ ಸದಸ್ಯರು ಯೋಜನೆಯನ್ನು ರೂಪಿಸಿದ್ದಾರೆಂದು ಹೇಳಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com