ಮುಖ್ಯಮಂತ್ರಿ ತಮ್ಮ ಸರ್ಕಾರದ ಬಹುಮತ ಸಾಬೀತುಪಡಿಸಬೇಕೆಂದು ಮನಬಂದಂತೆ ವಿಧಾನಸಭೆ ಅಧಿವೇಶನ ಕರೆಯುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ ಎಂದು ಹೇಳಿದೆ. ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉಳಿಗಾಲವಿದೆ. ಸಂವಿಧಾನದ 175ನೇ ಕಲಂನ ಅನ್ವಯ ರಾಜ್ಯಪಾಲರಿಗೆ ಸೀಮಿತ ಅಧಿಕಾರ ಮಾತ್ರ ಇದೆ ಎಂದ ನ್ಯಾಯಾಪೀಠ, ರಾಜ್ಯಪಾಲರಿಗೆ ಕೆಲವೊಂದು ನಿರ್ಧಾರಗಳನ್ನು ಮಾತ್ರ ಸ್ವತಂತ್ರವಾಗಿ ತೆಗೆದುಕೊಳ್ಳುವ ಅಧಿಕಾರವಿದೆ. ಅದನ್ನು ಬಳಸಿಕೊಂಡರೆ ಸಾಕು, ಮುಖ್ಯಮಂತ್ರಿ ಅಧಿಕಾರವನ್ನು ಚಲಾಯಿಸುವಂತಿಲ್ಲ. ಅಷ್ಟೇ ಅಲ್ಲದೇ, ಯಾವುದೇ ನಿರ್ಧಾರ ತೆಗೆದುಕೊಳ್ಳವ ಮುನ್ನ ಮುಖ್ಯಮಂತ್ರಿ ಮತ್ತು ಸಚಿವರ ಸಲಹೆಗಳನ್ನು ಪಡೆಯುವುದು ಅಗತ್ಯವಾಗಿದೆ ಎಂದು ಪೀಠ ತಿಳಿಸಿದೆ.