ಸ್ವಚ್ಛತೆಗೊಳಿಸುವಾಗ ರೈಲಿಗೆ ಸಿಲುಕಿ 4 ಗ್ಯಾಂಗ್ ಮೆನ್ ಸಾವು

ಕುರ್ಮಾ ಮತ್ತು ವಿದ್ಯಾವಿಹಾರ್ ನಿಲ್ದಾಣಗಳ ನಡುವೆ ರೈಲ್ವೆ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಗ್ಯಾಂಗ್ ಮನ್ ಗಳು ಸ್ಥಳೀಯ ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ...
ಸ್ವಚ್ಛತೆಗೊಳಿಸುವಾಗ ರೈಲಿಗೆ ಸಿಲುಕಿ 4 ಗ್ಯಾಂಗ್ ಮೆನ್ ಸಾವು (ಸಾಂದರ್ಭಿಕ  ಚಿತ್ರ)
ಸ್ವಚ್ಛತೆಗೊಳಿಸುವಾಗ ರೈಲಿಗೆ ಸಿಲುಕಿ 4 ಗ್ಯಾಂಗ್ ಮೆನ್ ಸಾವು (ಸಾಂದರ್ಭಿಕ ಚಿತ್ರ)
Updated on
ಮುಂಬೈ; ಕುರ್ಮಾ ಮತ್ತು ವಿದ್ಯಾವಿಹಾರ್ ನಿಲ್ದಾಣಗಳ ನಡುವೆ ರೈಲ್ವೆ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಗ್ಯಾಂಗ್ ಮನ್ ಗಳು ಸ್ಥಳೀಯ ರೈಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. 
ಇಂದು ಬೆಳಿಗ್ಗೆ 6.15 ರಿಂದ 6.30 ರ ನಡುವಿನ ಸಮಯದಲ್ಲಿ ನಡೆದಿದೆ. ಛತ್ರಪತಿ ಶಿವಾಜಿ ಟರ್ಮಿನಸ್ ಕಡೆಗೆ ಹೋಗುತ್ತಿದ್ದ ಸ್ಥಳೀಯ ರೈಲು ನಾಲ್ಕು ಗ್ಯಾಂಗ್ ಮೆನ್ ಗಳ ಮೇಲೆ ಹರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಪ್ರಾಥಮಿಕ ವರದಿಗಳ ಪ್ರಕಾರ 4 ಗ್ಯಾಂಗ್ ಮೆನ್ ಗಳು ಕುರ್ಲಾ-ವಿದ್ಯಾವಿಹಾರ ರೈಲು ನಿಲ್ದಾಣಗಳ ನಡುವೆ ರೈಲಿನ ಹಳಿಯ ಮೇಲೆ ನಡೆದುಹೋಗುತ್ತಿದ್ದರು. ಬೆಳಗಿನ ಜಾವದಲ್ಲಿ ಕತ್ತಲು ಇದ್ದ ಕಾರಣ ನಡೆಯುತ್ತಿದ್ದ ಹಳಿಯ ಮೇಲೆ ಕರ್ಜಾತ್ - ಸಿಎಸ್ ಟಿ ಲೋಕಲ್ ರೈಲು ಬರುತ್ತಿರುವುದು ಕಾಣಿಸಿಲ್ಲ. ಹೀಗಾಗಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 
ರೈಲು ಹರಿಯುತ್ತಿದ್ದಂತೆ ತೀವ್ರವಾಗಿ ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆಂದು ಕೇಂದ್ರ ರೈಲ್ವೆ ಉಪ ಪೊಲೀಸ್ ಆಯುಕ್ತ ರೂಪಾಲಿ ಅಂಬುರೆ ಹೇಳಿದ್ದಾರೆ. ಘಟನೆ ಸಂಬಂಧ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. 
2013ರ ನವೆಂಬರ್‌ 3ರಂದು ಕೂಡ ಇಂತಹದ್ದೇ ಘಟನೆ ನಡೆದಿತ್ತು. ರೈಲು ಹಳಿಗಳ ಮೇಲೆ ನಿರ್ವಹಣಾ ಕಾಮಗಾರಿ ನಡೆಸುತ್ತಿದ್ದ ನಾಲ್ವರು ಗ್ಯಾಂಗ್‌ಮನ್‌ಗಳ ಮೇಲೆ ಕೊಲ್ಹಾಪುರಕ್ಕೆ ಹೋಗುತ್ತಿದ್ದ ರೈಲು ಹರಿದು ಆ ನಾಲ್ವರೂ ಮೃತಪಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com