ಜಮ್ಮು ಕಾಶ್ಮೀರದಲ್ಲಿ ಸಿಆರ್​ಪಿಎಫ್ ಯೋಧರ ಮೇಲೆ ಉಗ್ರರ ಗುಂಡಿನ ದಾಳಿ:ಇಬ್ಬರು ಯೋಧರ ಸಾವು

ಸಿಆರ್​ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿ 10 ಯೋಧರು ಗಾಯಗೊಂಡಿದ್ದಾರೆ. ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಶ್ರೀನಗರ:  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಪಾಂಪೊರೆ ಪಟ್ಟಣದಲ್ಲಿ ಸಿಆರ್​ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಯೋಧರು ಸಾವನ್ನಪ್ಪಿ 10 ಯೋಧರು ಗಾಯಗೊಂಡಿದ್ದಾರೆ.

ಉಗ್ರರು ಬಸ್ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಸಮೀಪದಲ್ಲಿದ್ದ ತರಬೇತಿ ಕೇಂದ್ರವೊಂದರೊಳಗೆ ನುಗ್ಗಿದ್ದಾರೆ. ತರಬೇತಿ ಕೇಂದ್ರದಲ್ಲಿ ಹತ್ತಾರು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ತರಬೇತಿ ಕೇಂದ್ರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 50 ಸಿಬ್ಬಂದಿ ಇದ್ದರು ಎನ್ನಲಾಗಿದೆ.

ಕಟ್ಟಡವನ್ನು ಸುತ್ತುವರಿದ ಸಿಆರ್ ಪಿಎಫ್ ಯೋಧರು ಇದುವರೆಗೂ 70 ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಇನ್ನೂ ಹಲವರು ಕಟ್ಟಡದ ಒಳಗೆ ಸಿಲುಕಿದ್ದಾರೆ, ಹೆಚ್ಚಿನ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸುತ್ತಿದ್ದು, ಕಾರ್ಯಾಚರಣೆ ಪ್ರಗತಿಯಲ್ಲಿದೆ. ಕಟ್ಟಡದಲ್ಲಿ ಎಷ್ಟು ಉಗ್ರರು ನುಸುಳಿದ್ದಾರೆ, ಎಂಬ ಮಾಹಿತಿ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com