ಮತ್ತೆ ಸುದ್ದಿಯಲ್ಲಿ ಪೊರ್ನೋಗ್ರಫಿ: ಶಿಶುಕಾಮ ತಡೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

ಈ ಹಿಂದೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಪೋರ್ನೋಗ್ರಫಿ ನಿಷೇಧ ಸುದ್ಧಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಶಿಶಿಕಾಮ ತಡೆಗೆ ದಾರಿ ಹುಡುಕುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ...
ಮತ್ತೆ ಸುದ್ದಿಯಲ್ಲಿ ಪೊರ್ನೋಗ್ರಫಿ: ಶಿಶುಕಾಮ ತಡೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ
ಮತ್ತೆ ಸುದ್ದಿಯಲ್ಲಿ ಪೊರ್ನೋಗ್ರಫಿ: ಶಿಶುಕಾಮ ತಡೆಗೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

ನವದೆಹಲಿ: ಈ ಹಿಂದೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಪೋರ್ನೋಗ್ರಫಿ ನಿಷೇಧ ಸುದ್ಧಿ ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ಶಿಶಿಕಾಮ ತಡೆಗೆ ದಾರಿ ಹುಡುಕುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಈ ಕುರಿತಂತೆ ನಿನ್ನೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಶಿವ ಕೀರ್ತಿ ಸಿಂಗ್ ಅವರಿದ್ದ ಪೀಠ, ಅಮಾಯಕ ಮಕ್ಕಳು ಶೋಷಣೆಗೊಳಗಾಗುವುದನ್ನು ತಪ್ಪಿಸಬೇಕು. ಈ ಕುರಿತಂತೆ ಮಕ್ಕಳ ಪೋರ್ನೋಗ್ರಫಿ ತಡೆಯುವ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಅಫಿಡವಿಟ್ ಸಲ್ಲಿಸಬೇಕು. ವಾಕ್ ಸ್ವಾತಂತ್ರ್ಯವಿದೆ ಎಂದು ಹೇಳಿ ಮಕ್ಕಳ ಮೇಲೆ ಅಮಾನುಷ ಕೃತ್ಯಗಳನ್ನು ಎಸಗುವುದನ್ನು ದೇಶ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದೆ.

ವಿಚಾರಣೆ ವೇಳೆ ಸರ್ಕಾರ ಪೋರ್ನ್ ವೆಬ್ ಸೈಟ್ ಗಳನ್ನು ನಿರ್ಬಂಧಿಸುವ ವಿಚಾರ ಕಠಿಣ. ಅಭಿಪ್ರಾಯ ಭೇದಗಳಿಂದಾಗಿ ಜಾರಿಗೊಳಿಸುವುದು ಸಾಧ್ಯವಾಗುತ್ತಿಲ್ಲ ಎಂದು ವಾದಿಸಿತ್ತು. ಇದಕ್ಕೆ ಉತ್ತರಿಸಿರುವ ಪೀಠ, ಸರ್ಕಾರ ಪೋರ್ನ್ ವೆಬ್ ಸೈಟ್ ಗಳಿಗೆ ಒಂದು ಗೆರೆಯನ್ನು ಹಾಕಬೇಕು. ಇದರಲ್ಲಿ ಯಾವುದನ್ನು ಖಾಸಗಿಯಾಗಿ ನೋಡಬಹುದು ಹಾಗೂ ಯಾವುದನ್ನು ಸಾರ್ವಜನಿಕವಾಗಿ ನೋಡಬಹುದು ಎಂಬುದನ್ನು ನಿಗದಿ ಮಾಡುವಂತೆ ಸೂಚಿಸಿತು. ಅಲ್ಲದೆ, ಈ ಬಗ್ಗೆ ತಜ್ಞರು ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಸಲಹೆಗಳನ್ನು ಪಡೆಯುವಂತೆ ಸಲಹೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com