ಮುಂಬೈ: ತನ್ನ ಭದ್ರತೆ ಕಡಿತಗೊಳಿಸಿದ ಮುಂಬೈ ಪೊಲೀಸರ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಹೇಳಿದ್ದಾರೆ. ತನಗೆ ಭದ್ರತೆ ಕಡಿಮೆಗೊಳಿರುವುದರಿಂದ ಪೊಲೀಸರನ್ನು ಇನ್ನಿತರ ಒಳ್ಳೆಯ ಕಾರ್ಯಗಳಿಗೆ ನಿಯೋಜನೆ ಮಾಡಬಹುದು. ಇನ್ಮುಂದೆ ನನಗೆ ಭದ್ರತೆ ಬೇಕೆಂದೆನಿಸಿದಾಗ ಪೊಲೀಸರು ಆ ಕಾರ್ಯವನ್ನು ಮಾಡುತ್ತಾರೆ. ಮುಂಬೈ ಪೊಲೀಸರ ಮೇಲೆ ನನಗೆ ವಿಶ್ವಾಸವಿದೆ ಎಂದು ಅಮೀರ್ ಖಾನ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.