

ಮುಂಬೈ: ಶಾರೂಖ್ ಖಾನ್, ಅಮೀರ್ ಖಾನ್ ಸೇರಿದಂತೆ 40 ಮಂದಿ ಬಾಲಿವುಡ್ ನಟರ ಭದ್ರತೆಗಳನ್ನು ಕಡಿತಗೊಳಿಸಲಾಗಿದೆ ಎಂಬ ವರದಿಯನ್ನು ಮುಂಬೈ ಪೊಲೀಸರು ನಿರಾಕರಿಸಿದ್ದಾರೆ.
ಇಂದು ಬೆಳಗ್ಗೆಯಿಂದ ಬರುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅವರು ಮಾತ್ರ ತಮಗೆ ಒದಗಿಸಿದ್ದ ಭದ್ರತೆಯನ್ನು ಉಳಿಸಿಕೊಂಡವರಾಗಿದ್ದಾರೆ. ಇವರಿಗೆ ಇಬ್ಬರು ಸಶಸ್ತ್ರ ಪೊಲೀಸರು, ಕಾವಲು ವಾಹನ ಮತ್ತು ಒಬ್ಬ ಭದ್ರತಾಗಾರನನ್ನು ಒದಗಿಸಲಾಗಿದೆ.