ಮೋದಿ, ಪರ್ರಿಕರ್ ಹತ್ಯೆ ಮಾಡುವುದಾಗಿ ಇಸಿಸ್‌ನಿಂದ ಬೆದರಿಕೆ ಪತ್ರ

ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಪರ್ರಿಕರ್ ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವ ಐಸಿಸ್ ಸಹಿ ಒಳಗೊಂಡ ಅನಾಮಧೇಯ...
ಮನೋಹರ್ ಪರ್ರಿಕರ್ - ನರೇಂದ್ರ ಮೋದಿ
ಮನೋಹರ್ ಪರ್ರಿಕರ್ - ನರೇಂದ್ರ ಮೋದಿ
ಪಣಜಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ಪರ್ರಿಕರ್ ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವ ಇಸಿಸ್ ಸಹಿ ಒಳಗೊಂಡ ಅನಾಮಧೇಯ ಪತ್ರವೊಂದು ಬಂದಿದೆ.
ಗೋವಾ ಪೊಲೀಸರು ಈ ಪತ್ರವನ್ನು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನಿಸಿ, ಪ್ರಕರಣವನ್ನು ಉಗ್ರ ನಿಗ್ರಹ ದಳ(ಎಟಿಎಸ್)ಕ್ಕೆ ವರ್ಗಾವಣೆ ಮಾಡಿದೆ.
ಕಳೆದ ವಾರ ರಾಜ್ಯ ಸಚಿವಾಲಯಕ್ಕೆ ಪೋಸ್ಟ್ ಕಾರ್ಡ್ ಬೆದರಿಕೆ ಪತ್ರವೊಂದು ಬಂದಿದ್ದು, ಆ ಬಗ್ಗೆ ಗೋವಾ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
'ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಸಂಸ್ಥೆಗಳು ಈ ಪತ್ರದ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲೇ ಪತ್ರದ ಮೂಲವನ್ನು ಪತ್ತೆ ಹಚ್ಚಲಾಗುವುದು' ಎಂದು ಅವರು ಹೇಳಿದ್ದಾರೆ.
ಪತ್ರದಲ್ಲಿ ಮೋದಿ ಹಾಗೂ ಪರ್ರಿಕರ್ ಅವರನ್ನು ಹತ್ಯೆ ಮಾಡುವುದಾಗಿ ಹೇಳಿರುವ ಇಸಿಸ್, ದೇಶದಲ್ಲಿ ಗೋ ಹತ್ಯೆ ನಿಷೇಧದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com