ಪೊಲೀಸ್ ಅಧಿಕಾರಿಯ ಕಾರು ಕಳ್ಳತನ: ಉಗ್ರರ ಕೈಚಳಕ ಶಂಕೆ

ಪಠಾಣ್ ಕೋಟ್ ಮೇಲೆ ಉಗ್ರರ ತಾಂಡವವಾಡಿ ಒಂದು ವಾರ ಕಳೆದಿರುವ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರ ವಾಹನವೊಂದು ಕಳ್ಳತನವಾಗಿರುವುದಾಗಿ ತಿಳಿದುಬಂದಿದೆ...
ಪೊಲೀಸ್ ಅಧಿಕಾರಿಯ ಕಾರು ಕಳ್ಳತನ: ಉಗ್ರರ ಕೈಚಳಕ ಶಂಕೆ (ಸಂಗ್ರಹ ಚಿತ್ರ)
ಪೊಲೀಸ್ ಅಧಿಕಾರಿಯ ಕಾರು ಕಳ್ಳತನ: ಉಗ್ರರ ಕೈಚಳಕ ಶಂಕೆ (ಸಂಗ್ರಹ ಚಿತ್ರ)
Updated on: 

ನೋಯ್ಡಾ: ಪಠಾಣ್ ಕೋಟ್ ಮೇಲೆ ಉಗ್ರರ ತಾಂಡವವಾಡಿ ಒಂದು ವಾರ ಕಳೆದಿರುವ ಬೆನ್ನಲ್ಲೇ ಇದೀಗ ಮತ್ತೊಂದು ಆತಂಕಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದ್ದು, ಪೊಲೀಸ್ ಅಧಿಕಾರಿಯೊಬ್ಬರ ವಾಹನವೊಂದು ಕಳ್ಳತನವಾಗಿರುವುದಾಗಿ ತಿಳಿದುಬಂದಿದೆ.

ಇತ್ತೀಚೆಗಷ್ಟೇ ಅಧಿಕಾರಿಯೊಬ್ಬರ ವಾಹನದ ಮೇಲೆ ದಾಳಿ ಮಾಡಿ ವಾಹನವನ್ನು ಹೊತ್ತೊಯ್ದಿದ್ದ ಉಗ್ರರ ಗುಂಪೊಂದು ಪಠಾಣ್ ಕೋಟ್ ಮೇಲೆ ದಾಳಿ ಮಾಡಿತ್ತು. ಈ ಘಟನೆ ನಡೆದು ಇದೀಗ ವಾರಗಳಷ್ಟೇ ಕಳೆದಿದೆ. ಇದೀಗ ಇದೇ ರೀತಿಯಾಗಿ ಅನುಮಾನ ಹುಟ್ಟಿಸುವ ಮತ್ತೊಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ಹಿರಿಯ ಗಡಿ ಪೊಲೀಸ್ ಅಧಿಕಾರಿಯೊಬ್ಬರ ವಾಹನವೊಂದು ಕಳ್ಳತನವಾಗಿರುವುದಾಗಿ ತಿಳಿದುಬಂದಿದೆ.

ದೆಹಲಿಯ ನೊಯ್ಡಾದಲ್ಲಿರುವ ಪೊಲೀಸ್ ಅಧಿಕಾರಿಯ ನಿವಾಸದ ಎದುರು ನಿಲುಗಡೆ ಮಾಡಲಾಗಿದ್ದ ವಾಹನವನ್ನು ಇಂದು ಬೆಳಿಗ್ಗೆ ಕಳ್ಳತನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಕೆಲವೇ ದಿನಗಳಲ್ಲಿ ದೇಶದಾದ್ಯಂತ ಗಣರಾಜ್ಯೋತ್ಸವ ದಿನ ಆಚರಿಸಲಾಗುತ್ತಿದ್ದು, ದೆಹಲಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಹೀಗಾಗಿ ಗಣರಾಜ್ಯೋತ್ಸವ ದಿನದಂದು ಉಗ್ರರು ದಾಳಿ ನಡೆಸಲು ಸಂಚು ರೂಪಿಸುತ್ತಿರುವುದಾಗಿ ತಿಳಿದುಬಂದಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದೀಗ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರ ವಾಹನ ಕಳ್ಳತನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಉಗ್ರರ ಕೈಚಳಕ ಕುರಿತಂತೆ ಶಂಕೆಗಳು ಮೂಡತೊಡಗಿದೆ. ಕಳ್ಳತನವಾಗಿರುವುದು ಟಾಟಾ ಸಫಾರಿ ಕಾರು ಎಂದು ಹೇಳಲಾಗುತ್ತಿದೆ. ಕಾರು ಚಂಢೀಗಡದ ನೋಂದಣಿ ಸಂಖ್ಯೆಯನ್ನು ಹೊಂದಿದ್ದು, ಸಿಹೆಚ್2915 ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com