ಉತ್ತರಪ್ರದೇಶ: ಗಣರಾಜ್ಯೋತ್ಸವ ದಿನಾಚರಣೆ ಮತ್ತು ಹರಿದ್ವಾರದಲ್ಲಿನ ಅರ್ಧಕುಂಭ ಮೇಳದ ವೇಳೆ ದಾಳಿ ನಡೆಸಲು ಸಂಚು ಹೂಡಿದ್ದ ಇಸ್ಲಾಮಿಕ್ ಸ್ಟೇಟ್ ನ ಇಬ್ಬರು ಶಂಕಿತ ಉಗ್ರರನ್ನು ಶುಕ್ರವಾರ ಬಂಧಿಸಲಾಗಿದೆ.
ಉತ್ತರಪ್ರದೇಶದ ಉಗ್ರ ನಿಗ್ರಹ ದಳದವರು ಅಲೀಂ ಅಹ್ಮದ್ ಎಂಬಾತನನ್ನು ಲಕ್ನೋದಿಂದ ಮತ್ತು ರಿಜ್ವಾನ್ ಅಹ್ಮದ್ ಎಂಬಾತನನ್ನು ಖುಷಿ ನಗರದಿಂದ ಬಂಧಿಸಲಾಗಿದೆ. ಲಕ್ನೋಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಮುನ್ನಾ ದಿನ ಈ ಬಂಧನ ನಡೆದಿದೆ.
ಬಂಧಿತರನ್ನು ವಿಚಾರಣೆಗೊಳಪಡಿಸಿದ್ದು, ಈ ಸಂಚಿನ ಬಗ್ಗೆ ಹೆಚ್ಚಿನ ವಿವರಗಳು ಬಹಿರಂಗವಾಗಲಿವೆ ಎಂದು ಹೆಚ್ಚುವರಿ ಪೊಲೀಸ್ ನಿರ್ದೇಶಕ ದಲ್ಜೀತ್ ಸಿಂಗ್ ಹೇಳಿದ್ದಾರೆ.
ಅದೇ ಹರಿದ್ವಾರದಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ನಂತರ ನವದೆಹಲಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.