

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅಮಿತ್ ಶಾ ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಆಡ್ವಾನಿ, ಎಂಎಂ ಜೋಷಿ ಗೈರಿನಲ್ಲಿ ಅಮಿತ್ ಶಾಗೆ ಎರಡನೇ ಬಾರಿಗೆ ಬಿಜೆಪಿ ಅಧ್ಯಕ್ಷ ಪಟ್ಟಕಟ್ಟಲಾಗಿದೆ ಎಂದು ದೆಹಲಿ ಬಿಜೆಪಿ ಚುನಾವಣಾಧಿಕಾರಿ ಅವಿನಾಶ್ ರಾಯ್ ಖನ್ನಾ ಪ್ರಕಟಿಸಿದ್ದಾರೆ.
ಅಮಿತ್ ಶಾ ಮತ್ತೆ ಅಧ್ಯಕ್ಷ ಗಾದಿಗೇರುತ್ತಿದ್ದು, ಕೇಂದ್ರ ಕಚೇರಿಯಲ್ಲಿ ಸಂಭ್ರಮ ವಾತಾವರಣ ಮನೆ ಮಾಡಿದೆ. ಶಾಗೆ ಹಿರಿಯ ಕಿರಿಯರು ಅಭಿನಂದಿಸಿದರು.
ಪ್ರಧಾನಿ ಮೋದಿ ನಿಕಟವರ್ತಿ ಅಮಿತ್ ಶಾ, ಲೋಕಸಭೆ ಚುನಾವಣೆ ಗೆಲವಿನ ನಂತರ ರಾಜನಾಥ್ ಸಿಂಗ್ ಅವರಿಂದ ತೆರವಾಗಿದ್ದ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಮೊದಲ ಅವಧಿಯ ಅಧ್ಯಕ್ಷ ಅವಧಿ ಶನಿವಾರ ಪೂರ್ಣವಾಗಿದ್ದು, 3 ವರ್ಷಗಳ ಎರಡನೇ ಅವಧಿ ಭಾನುವಾರದಿಂದ ಆರಂಭವಾಗಲಿದೆ.