ಅಮಿತ್ ಶಾ ಮರು ಆಯ್ಕೆ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅಮಿತ್ ಶಾ ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ...
ಅಮಿತ್ ಶಾ
ಅಮಿತ್ ಶಾ
Updated on: 

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅಮಿತ್ ಶಾ ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಪ್ರಧಾನಿ ಮೋದಿ ನಿಕಟವರ್ತಿ ಅಮಿತ್ ಶಾ, ಲೋಕಸಭೆ ಚುನಾವಣೆ ಗೆಲವಿನ ನಂತರ ರಾಜನಾಥ್ ಸಿಂಗ್ ಅವರಿಂದ ತೆರವಾಗಿದ್ದ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಮೊದಲ ಅವಧಿಯ ಅಧ್ಯಕ್ಷ ಅವಧಿ ಶನಿವಾರ ಪೂರ್ಣವಾಗಿದ್ದು, 3 ವರ್ಷಗಳ ಎರಡನೇ ಅವಧಿ ಭಾನುವಾರದಿಂದ ಆರಂಭವಾಗಲಿದೆ. ಚುನಾವಣೆ ಎಂಬುದು ಇಲ್ಲಿ ನಾಮ್ ಕೇ ವಾಸ್ತೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭಾನುವಾರ ಚುನಾವಣೆಗೆ ಶಾ ನಾಮಪತ್ರ ಸಲ್ಲಿಸುವರು. ಬಿಜೆಪಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಹಿರಿಯ ನಾಯಕರು ಹಾಜರಿರಲಿದ್ದಾರೆ. ಈ ವೇಳೆ ಅವರ ಅವಿರೋಧ ಆಯ್ಕೆ ಘೋಷಣೆಯಾಗಲಿದೆ ಎನ್ನಲಾಗಿದೆ. ಶಾ ಅಧ್ಯಕ್ಷ ಹುದ್ದೆಗೇರಿದ ಮೇಲೆ ಬಿಜೆಪಿ ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್, ಜಮ್ಮು-ಕಾಶ್ಮೀರದಲ್ಲಿ ಗೆಲವು ಸಾಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com