ಬಿಎಸ್ ಪಿ ತೊರೆದ ಮತ್ತೋರ್ವ ನಾಯಕ: ಮಾಯಾವತಿ ವಿರುದ್ಧ ಗಂಭೀರ ಆರೋಪ

ಮಾಜಿ ಶಾಸಕ ರವೀಂದ್ರ ನಾಥ್ ತ್ರಿಪಾಠಿ, ಬಿಎಸ್ ಪಿಯಿಂದ ಹೊರನಡೆದಿದ್ದು ಮಾಯಾವತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಾಯಾವತಿ
ಮಾಯಾವತಿ
Updated on: 

ಲಖನೌ: ಉತ್ತರ ಪ್ರದೇಶ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಎಸ್ ಪಿಯ ಪ್ರಮುಖ ನಾಯುಕ ಪಕ್ಷ ತೊರೆಯುತ್ತಿದ್ದು, ಮಾಜಿ ಶಾಸಕ ರವೀಂದ್ರ ನಾಥ್ ತ್ರಿಪಾಠಿ, ಬಿಎಸ್ ಪಿಯಿಂದ ಹೊರನಡೆದಿದ್ದು ಮಾಯಾವತಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪೂರ್ವಾಂಚಲದ ಬಿಎಸ್ ಪಿ ನಾಯಕರಾಗಿದ್ದ ರವೀಂದ್ರನಾಥ್ ತ್ರಿಪಾಠಿ, ಮಾಯಾವತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು ಪಕ್ಷದ ಸಂಸ್ಥಾಪಕ ಕಾನ್ಷಿರಾಮ್ ಅವರ ನಿಧನಾ ನಂತರ ಮಾಯಾವತಿ ದಲಿತ ಸಿದ್ಧಾಮತದಿಂದ ದೂರವಾಗಿದ್ದು ಹಣದ ದುರಾಸೆಗಿಡಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಬಿಎಸ್ ಪಿ ನಾಯಕಿ ಮಾಯಾವತಿ, ಪಕ್ಷವನ್ನು ಚಿಟ್ ಫಂಡ್ ಕಂಪನಿ ರೀತಿಯಲ್ಲಿ ಮುನ್ನಡೆಸುತ್ತಿದ್ದು, ಹಣ ಇರುವವರು ಪಕ್ಷದ ಆಯಕಟ್ಟಿನ ಸ್ಥಾನ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿರುವ ರವೀಂದ್ರನಾಥ್ ತ್ರಿಪಾಠಿ, ಇನ್ನೂ ಹಲವು ಬಿಎಸ್ ಪಿ ನಾಯಕರು ಪಕ್ಷವನ್ನು ತೊರೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಳೆದ 15 ದಿನಗಳಲ್ಲಿ ಬಿಎಸ್ ಪಿ ಪಕ್ಷವನ್ನು ತೊರೆದ ಮೂರನೇ ನಾಯಕ ರವೀಂದ್ರನಾಥ್ ತ್ರಿಪಾಠಿಯಾಗಿದ್ದು, ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಮತ್ತೊಬ್ಬ ಪ್ರಮುಖ ನಾಯಕರಾದ ಆರ್ ಕೆ ಚೌಧರಿ ಇತ್ತೀಚೆಗಷ್ಟೇ ಬಿಎಸ್ ಪಿ ಪಕ್ಷವನ್ನು ತೊರೆದು ಮಾಯಾವತಿ ವಿರುದ್ಧ ದುರಾಸೆಗೀಡಾಗಿರುವ ಆರೋಪ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com