ನೀಟ್ ವಿಧೇಯಕ: ಸರ್ಕಾರದ ಮೇಲೆ ಸುಪ್ರೀಂ ಕೋರ್ಟ್ ಅಸಮಾಧಾನ

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯಿಂದ ರಾಜ್ಯಗಳಿಗೆ ವಿನಾಯ್ತಿ ನೀಡುವ ವಿಧೇಯಕವನ್ನು ಪ್ರಚುರಪಡಿಸುವ...
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
Updated on: 
ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯಿಂದ ರಾಜ್ಯಗಳಿಗೆ ವಿನಾಯ್ತಿ ನೀಡುವ ವಿಧೇಯಕವನ್ನು ಪ್ರಚುರಪಡಿಸುವ ಕೇಂದ್ರದ ಕ್ರಮಕ್ಕೆ ಸುಪ್ರೀಂ ಕೋರ್ಟ್ ನಿನ್ನೆ ಅಸಮಾಧಾನ ವ್ಯಕ್ತಪಡಿಸಿದೆ. ಆದರೆ ಇದು ಗೊಂದಲಕ್ಕೆ ಕಾರಣವಾಗಬಹುದು ಎಂದು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿದೆ.
ನೀಟ್, ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಾಗಿದೆ.   
ನ್ಯಾಯಮೂರ್ತಿ ದಾವೆ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮ ಸರಿಯಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ನಂತರವೂ ಸರ್ಕಾರ ಹೀಗೆ ಮಾಡಬಾರದಾಗಿತ್ತು. ಯಾಕೆ ನೀವು ಈ ರೀತಿ ಮಾಡಿದಿರಿ? ಮೇಲ್ನೋಟಕ್ಕೆ ನೋಡುವಾಗ ವಿಧೇಯಕ ಸರಿಯಾಗಿದೆ ಎಂದು ಅನಿಸುವುದಿಲ್ಲ. ಇದು ತೊಂದರೆಯನ್ನುಂಟುಮಾಡುತ್ತದೆ ಎಂದು ಹೇಳಿದೆ.
'' ಈ ವರ್ಷ ನೀಟ್ ಪರೀಕ್ಷೆಯಿಂದ ರಾಜ್ಯಗಳಿಗೆ ವಿನಾಯ್ತಿ ನೀಡಿದ್ದೀರಿ. ಇದು ನಮ್ಮ ಆದೇಶದ ಉಲ್ಲಂಘನೆಯಾಗಿದೆ. ಇಲ್ಲಿ ಏಕರೂಪತೆಯಿರಬೇಕು. ಕನಿಷ್ಟ ಗುಣಮಟ್ಟಗಳನ್ನು ಸರ್ಕಾರ ಕಾಯ್ದುಕೊಳ್ಳಬೇಕು. ಇಂದು ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ ಕಟ್ಟಲು ಮೇಲ್ಮಧ್ಯಮ ವರ್ಗದವರಿಗೆ ಕೂಡ ಕಷ್ಟವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್ ವಿಚಾರಣೆಯನ್ನು ತ್ವರಿತಗೊಳಿಸಿದೆ.
ವೈದ್ಯಕೀಯ ಶಿಕ್ಷಣದಲ್ಲಿ ಕನಿಷ್ಠ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಇದು ಸಮಾಜದ ಜನರ ಹಿತಾಸಕ್ತಿಯ ವಿಷಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಈ ವರ್ಷ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪದವಿಪೂರ್ವ ವೈದ್ಯಕೀಯ ಮತ್ತು ದಂತ ಶಿಕ್ಷಣ ಕೋರ್ಸ್ ಗಳಿಗೆ ದೇಶಾದ್ಯಂತ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಮೊದಲು ಸುಪ್ರೀಂ ಕೋರ್ಟ್ ಆದೇಶವನ್ನು ಸ್ವೀಕರಿಸಿದ್ದರೂ ಕೂಡ ಒಂದು ವರ್ಷದ ಮಟ್ಟಿಗೆ ಮುಂದೂಡುವಂತೆ ವಿಧೇಯಕವನ್ನು ಜಾರಿಗೆ ತಂದಿದೆ.
ಇದಕ್ಕೆ ನ್ಯಾಯಾಲಯ ಈ ಮೇಲಿನಂತೆ ಸರ್ಕಾರಕ್ಕೆ ಛೀಮಾರಿ ಹಾಕಿದೆ.ಅರ್ಜಿಯಲ್ಲಿ ಟ್ರಸ್ಟ್, ವಿಧೇಯಕ ಸಂವಿಧಾನದ ತತ್ವಗಳನ್ನು ಉಲ್ಲಂಘಿಸುತ್ತದೆ.ಹಾಗಾಗಿ ಇದಕ್ಕೆ ಕೂಡಲೇ ತಡೆಯಾಜ್ಞೆ ತರಬೇಕು. ಇದೊಂದು ಉದಾಹರಣೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಸಲ್ಲಿಸಿತ್ತು.

ಕೇಂದ್ರ ಸರ್ಕಾರದ ವಿಧೇಯಕ, ಸುಪ್ರೀಂ ಕೋರ್ಟ್ ಕಾನೂನನ್ನು ಉಲ್ಲಂಘಿಸುತ್ತದೆ.ಹಾಗಾಗಿ ವಿಧೇಯಕವನ್ನು ರದ್ದುಪಡಿಸಬೇಕು ಎಂದು ಸಂಘಟನೆ ಪರ ಹಿರಿಯ ವಕೀಲ ಅಮರೇಂದ್ರ ಶರಣ್ ವಾದ ಮಂಡಿಸಿದ್ದರು. ನೀಟ್ ಪರೀಕ್ಷೆ ಸಂಬಂಧ ಇಂದೋರ್ ಮೂಲದ ವೈದ್ಯ ಆನಂದ್ ರೈ ಎಂಬುವವರು ಕೂಡ ಅರ್ಜಿ ಸಲ್ಲಿಸಿದ್ದರು. 

ಎರಡನೇ ಸುತ್ತಿನ ನೀಟ್ ಪರೀಕ್ಷೆ ಈ ತಿಂಗಳ 24ರಂದು ನಿಗದಿಯಾಗಿದೆ.
ವಿಧೇಯಕ ಕುರಿತು ನ್ಯಾಯಾಲಯಕ್ಕೆ ವಿವರಣೆ ನೀಡಿದ ಅಟೋರ್ನಿ ಜನರಲ್ ಮುಕುಲ್ ರೊಹಟ್ಗಿ ನೀಡಿ, ಕೆಲವು ರಾಜ್ಯಗಳು ಸುಪ್ರೀಂ ಕೋರ್ಟ್ ಆದೇಶ ಬರುವ ಮೊದಲೇ ತಮ್ಮದೇ ಪರೀಕ್ಷೆಯನ್ನು ನಡೆಸಿವೆ. ಹಾಗಾಗಿ ಅಸಮಾನತೆಗೆ ಅವಕಾಶ ನೀಡುವುದಿಲ್ಲ. ಸರ್ಕಾರ ತಂದಿರುವ ವಿಧೇಯಕದಲ್ಲಿ ರಾಜ್ಯಗಳಿಗೆ ತಮ್ಮ  ರಾಜ್ಯದಲ್ಲಿ ಪರೀಕ್ಷೆ ನಡೆಸುವ ಅಥವಾ ನೀಟ್ ಪರೀಕ್ಷೆ ಮೂಲಕ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಸೇರುವ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com