ನಮ್ಮ ತನಿಖೆ ಸಂದರ್ಭದಲ್ಲಿ, ಸಿಂಹಗಳು ಮೊಟ ಸಮದಿಯಾಲಾ ಹತ್ತಿರ ಬೆಡಿಯಾ ಗ್ರಾಮದಲ್ಲಿ ಹಸುವೊಂದನ್ನು ಕೊಂದು ಹಾಕಿವೆ. ಅದರ ಸುತ್ತಮುತ್ತಲ ಗ್ರಾಮದಲ್ಲಿ ಮತ್ತೆ ಮೂರು ಹಸುಗಳನ್ನು ಕೊಂದಿವೆ. ಬೆಳಗ್ಗೆ ವಿಷಯ ಗಮನಕ್ಕೆ ಬಂದಾಗ ದಲಿತರಲ್ಲಿ ಹಸುಗಳ ಅವಶೇಷಗಳನ್ನು ಮಣ್ಣು ಮಾಡಲು ಹೇಳಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ತಿಳಿದುಬಂದಿದೆ ಎಂದು ತ್ರಿವೇದಿ ತಿಳಿಸಿದ್ದಾರೆ.