

ನವದೆಹಲಿ: ದಲಿತ ಸಮುದಾಯದ ಮೇಲೆ ಬಿಜೆಪಿ ಗೂಂಡಾಗಳಿಂದ ನಡೆಯುತ್ತಿರುವ ದಾಳಿಯನ್ನು ಖಂಡಿಸಿ ಬಿಜೆಪಿಯ ಎಲ್ಲಾ ದಲಿತ ಶಾಸಕರು ರಾಜೀನಾಮೆ ನೀಡಬೇಕೆಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಕೇಜ್ರಿವಾಲ್ ‘ಉದಿತ್ ಜಿ ಮತ್ತು ಬಿಜೆಪಿಯ ಎಲ್ಲಾ ದಲಿತ ಸಂಸತ್ ಸದಸ್ಯರೂ ರಾಷ್ಟ್ರಾದ್ಯಂತ ಬಿಜೆಪಿ ಗೂಂಡಾಗಳಿಂದ ದಲಿತ ಸಮುದಾಯದ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಪ್ರತಿಭಟಿಸಿ ರಾಜೀನಾಮೆ ನೀಡಬೇಕು’ ಎಂದು ಅವರು ಹೇಳಿದ್ದಾರೆ.
ಹಿಂದೂ ಧರ್ಮವು ಅದರ ಸಂರಕ್ಷಕರೆಂದು ಹೇಳಿಕೊಳ್ಳುವ ಮಂದಿಯಿಂದ ಅಪಾಯಕ್ಕೆ ಒಳಗಾಗಿದೆ ಎಂದು ಬಿಜೆಪಿ ಸಂಸತ್ ಸದಸ್ಯ ಉದಿತ್ ರಾಜ್ ಅವರು ಶನಿವಾರ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.