ತ.ನಾಡು ಸ್ಪೀಕರ್ ಆಗಿ ಧನಪಾಲ್ ಆಯ್ಕೆ, ಸರ್ಕಾರ ಪ್ರತಿಪಕ್ಷವನ್ನು ಗೌರವಿಸುತ್ತೆ ಎಂದ ಜಯಾ

ಆಡಳಿತರೂಢ ಎಐಎಡಿಎಂಕೆಯ ಪಿ.ಧನಪಾಲ್ ಅವರು ಶುಕ್ರವಾರ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಯಲಲಿತಾ
ಜಯಲಲಿತಾ
Updated on: 
ಚೆನ್ನೈ: ಆಡಳಿತರೂಢ ಎಐಎಡಿಎಂಕೆಯ ಪಿ.ಧನಪಾಲ್ ಅವರು ಶುಕ್ರವಾರ ತಮಿಳುನಾಡು ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ವಿಧಾನಸಭೆ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಇಂದು ಸ್ವೀಕರ್ ಹುದ್ದೆಗೆ ಧನಪಾಲ್ ಅವರ ಹೆಸರನ್ನು ಹಾಗೂ ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ಪೊಲ್ಲಚಿ ವಿ ಜಯರಾಮನ್ ಅವರ ಹೆಸರನ್ನು ಪ್ರಸ್ತಾಪ ಮಾಡಿದರು. ಬಳಿಕ ಈ ಇಬ್ಬರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಜಯಲಲಿತಾ, ನಮ್ಮ ಸರ್ಕಾರ ಪ್ರತಿಪಕ್ಷವನ್ನು ಗೌರವಿಸುತ್ತೆ ಎಂದು ಹೇಳಿದರು.
ಇನ್ನು ಎರಡನೇ ಅವಧಿಗೆ ತಮಿಳುನಾಡು ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾದ ಧನಪಾಲ್ ಅವರು, ಜಯಲಲಿತಾ ಅವರ ಐತಿಹಾಸಿಕ ಗೆಲುವನ್ನು ಸ್ಲಾಘಿಸಿದರು.  ಜಯಲಲಿತಾ ಅವರು ಕೇವಲ ತಮ್ಮ ಸಾಧನೆಗಳನ್ನೇ ಮುಂದಿಟ್ಟುಕೊಂಡು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಿ ಗೆಲುವು ಸಾಧಿಸಿದ್ದಾರೆ ಮತ್ತು ಧರ್ಮವನ್ನು ರಕ್ಷಿಸಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com