ದೇಶ

ವಿಶ್ವ ಪರಿಸರ ದಿನಾಚರಣೆ: ಪೌರ ಕಾರ್ಮಿಕರೊಡಗೂಡಿ ಕಸ ಗುಡಿಸಿದ ಕಿರಣ್ ಬೇಡಿ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನೂತನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಭಾನುವಾರ ಪೌರ ಕಾರ್ಮಿಕರೊಡನೆ ಸೇರಿ ಪುದುಚೆರಿಯಲ್ಲಿ ಕಸ ವಿಲೇವಾರಿ ..

ವಿಶ್ವ ಪರಿಸರ ದಿನಾಚರಣೆ: ಪೌರ ಕಾರ್ಮಿಕರೊಡಗೂಡಿ ಕಸ ಗುಡಿಸಿದ ಕಿರಣ್ ಬೇಡಿ
ಕಿರಣ್ ಬೇಡಿ
Published On :

ಪುದುಚೆರಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನೂತನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಭಾನುವಾರ ಪೌರ ಕಾರ್ಮಿಕರೊಡನೆ ಸೇರಿ ಪುದುಚೆರಿಯಲ್ಲಿ ಕಸ ವಿಲೇವಾರಿ ಕಾರ್ಯದಲ್ಲಿ ಪಾಲ್ಗೊಂಡರು.

ನಗರಪಾಲಿಕೆ ಕಾರ್ಮಿಕರೊಡನೆ ನಗರದ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಟ್ರೀಟ್ ಮತ್ತು ಗಿಂಗೀ ಸಾಲೈನಲ್ಲಿ ಕಸವಿಲೇವಾರಿ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಪುದುಚ್ಚೇರಿಯನ್ನು ಸ್ವಚ್ಚ ನಗರವನ್ನಾಗಿಸಲು ಪೌರ ಕಾರ್ಮಿರೊಡನೆ ಪ್ರತಿ ಭಾನುವಾರವೂ ಕೆಲಸ ಮಾಡುವುದಾಗಿ ಹೇಳಿದರು. ಸಮಾಜದಲ್ಲಿ ಪೌರ ಕಾರ್ಮಿಕರು ಮತ್ತು ಪೊಲೀಸರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು.

ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯದರ್ಶಿ ತೇವಾ ನೀದಿ ದಾಸ್, ರಾಜ್ ನಿವಾಸ್ ಮತ್ತಿತರ ಅಧಿಕಾರಿಗಳು ಹಾಗೂ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳೂ ಕಸ ವಿಲೇವಾರಿ ಕಾರ್ಯದಲ್ಲಿ ಪಾಲ್ಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.