

ನವದಹೆಲಿ: ಏಳು ಭಾರತೀಯ ರಾಯಭಾರಿ ಕಚೇರಿಗಳ ವೆಬ್ ಸೈಟ್ ಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ತಮ್ಮನ್ನು ತಾವು ದಾಳಿಕೋರರು ಹಾಗೂ ರೋಮ್ಯಾಂಟಿಕ್ ಎಂದು ಕರೆದು ಕೊಂಡಿರುವ ಹ್ಯಾಕರ್ಸ್ ಈ ಕೃತ್ಯ ನಡೆಸಿದ್ದಾರೆ.
ಭಾರತೀಯ ರಾಯಭಾರ ವೆಬ್ ಸೈಟ್ ಗೆ ತಜಕಿಸ್ತಾನ ಮಾಲೀಕ. ಭಾರತ ಸರ್ಕಾರ ಗೊಂದಲಗೊಳ್ಳಬೇಡ, ನೋವು ಪಡಬೇಡ, " ವಿ ರಾಕ್, ಯೂ ಶಾಕ್, ಸಲ್ಯೂಟ್ ಪಾಕಿಸ್ತಾನ್ ಆರ್ಮಿ, ಪಾಕಿಸ್ತಾನ್ ಜಿಂದಾಬಾದ್ ! ಫೀಲ್ ದ ಪವರ್ ಆಫ್ ಪಾಕಿಸ್ತಾನ್ '' ಎಂಬ ಸಂದೇಶವನ್ನು ಹ್ಯಾಕರ್ಸ್ ಗಳು ರವಾನಿಸಿದ್ದಾರೆ.
ಈ ಕೆಳಗಿನ ಏಳು ರಾಯಭಾರ ಕಚೇರಿಗಳ ವೆಬ್ ಸೈಟ್ ಗಳು ಹ್ಯಾಕ್ ಆಗಿವೆ
1. Embassy of India in Ankara, Turkey
2. Embassy of India in Athens ,Greece
3. Embassy of India to Mexico
4. Consulate General of India, Sao Paulo, Brazil
5. Embassy of India in Bucharest , Romania
6. Embassy of India Dushanbe , Tajikstan
7. High Commission of India, Pretoria, South Africa