

ಪಣಜಿ: ಗೋವ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ, ಚುನಾವಣಾ ಪ್ರಣಾಳಿಕೆ ಭಾಗವಾಗಿ ಗೋವಾ ಡೈಲಾಗ್ಸ್ ನ್ನು ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡಲಿದೆ.
ತಿಂಗಳಾಂತ್ಯಕ್ಕೆ ದೆಹಲಿ ಸಿಎಂ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಗೋವಾಗೆ ಭೇಟಿ ನೀಡಲಿದ್ದು ಚುನಾವಣಾ ಪ್ರಣಾಳಿಕೆ ಭಾಗವಾಗಿ ದೆಹಲಿಯ ದೆಹಲಿ ಡೈಲಾಗ್ಸ್ ಮಾದರಿಯಲ್ಲೇ ಗೋವಾದಲ್ಲೂ ಆಮ್ ಆದ್ಮಿ ಪಕ್ಷ ಗೋವಾ ಡೈಲಾಗ್ಸ್ ಎಂಬ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಗೋವಾ ಆಮ್ ಆದ್ಮಿ ಪಕ್ಷದ ನಾಯಕ ರೂಪೇಶ್ ಶಿನ್ಕ್ರೆ ಮಾಹಿತಿ ನೀಡಿದ್ದಾರೆ.
ಅಕ್ರಮ ಮರಳುಗಾರಿಕೆ, ಕ್ಯಾಸಿನೊ ವ್ಯಾಪಾರ, ಮೀನು ಸೇರಿದಂತೆ ಇತರ ಹಲವು ಆಹಾರ ಪದಾರ್ಥಗಳ ಬೆಲೆ ಏರಿಕೆ ಸೇರಿದಂತೆ ಹಲವು ವಿಷಯಗಳನ್ನು ಪಟ್ಟಿ ಮಾಡಿಕೊಂಡಿದ್ದು ಚುನಾವಣೆ ಎದುರಿಸಲಿದ್ದೇವೆ ಎಂದು ಗೋವಾ ಆಮ್ ಆದ್ಮಿ ಪಕ್ಷದ ನಾಯಕರು ತಿಳಿಸಿದ್ದಾರೆ. ಇನ್ನು ಪಂಜಾಬ್ ಚುನಾವಣೆಗೂ ಸಿದ್ಧಗೊಳ್ಳುತ್ತಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ಆಪ್ ಕಾ ದಾನ್ ಎಂಬ ಆಪ್ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.