ಭಾರತದ ಎನ್ ಎಸ್ ಜಿ ಸೇರ್ಪಡೆಗೆ ಚೀನಾದ ವಿರೋಧವಿಲ್ಲ: ಸುಷ್ಮಾ ಅಚ್ಚರಿ ಹೇಳಿಕೆ

ಪರಮಾಣು ಪೂರೈಕೆದಾರರ ಒಕ್ಕೂಟ (ಎನ್‌ಎಸ್‌ಜಿ)ಕ್ಕೆ ಭಾರತವನ್ನು ಸೇರಿಸುವ ವಿಚಾರಕ್ಕೆ ಮೊದಲಿನಿಂದಲೂ ಚೀನಾ ದೇಶ ವಿರೋಧ ವ್ಯಕ್ತಪಡಿಸುತ್ತ ಬಂದಿದೆಯಾದರೂ, ಇತ್ತೀಚೆಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೀಡಿರುವ ಹೇಳಿಕೆ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ...
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)
ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)

ನವದೆಹಲಿ: ಪರಮಾಣು ಪೂರೈಕೆದಾರರ ಒಕ್ಕೂಟ (ಎನ್‌ಎಸ್‌ಜಿ)ಕ್ಕೆ ಭಾರತವನ್ನು ಸೇರಿಸುವ ವಿಚಾರಕ್ಕೆ ಮೊದಲಿನಿಂದಲೂ ಚೀನಾ ದೇಶ ವಿರೋಧ ವ್ಯಕ್ತಪಡಿಸುತ್ತ ಬಂದಿದೆಯಾದರೂ,  ಇತ್ತೀಚೆಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೀಡಿರುವ ಹೇಳಿಕೆ ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಎನ್ ಎಸ್ ಜಿ ಸೇರುವ ಭಾರತದ ಆಶಯಕ್ಕೆ ಅಡ್ಡಿಯಾಗಿದ್ದ ಚೀನಾ ತನ್ನ ನಿಲುವು ಬದಲಿಸಿದೆಯೇ? ಇಂತಹುದು ಜಿಜ್ಞಾಸೆಗೆ ಕಾರಣವಾಗಿರುವುದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಅವರ ಹೇಳಿಕೆ. ಭಾರತ ಎನ್‌ಎಸ್‌ಜಿಗೆ ಸೇರಲು ಚೀನಾ ವಿರೋಧಿಸುತ್ತಿಲ್ಲ ಎಂಬ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿಕೆ ಚೀನಾ ದೇಶ ಭಾರತದ ಒತ್ತಡಕ್ಕೆ ಮಣಿಯಿತೇ ಎಂಬ ವಾದ  ಹುಟ್ಟುಹಾಕಿದೆ. "ಭಾರತ ಎನ್‌ಎಸ್‌ಜಿ ಸೇರುವುದಕ್ಕೆ ಚೀನಾ ದೇಶದ ವಿರೋಧವಿಲ್ಲ. ಆದರೆ ಕೆಲ ಪ್ರಕ್ರಿಯೆ ಹಾಗೂ ಮಾನದಂಡದ ಬಗ್ಗೆ ಆ ದೇಶದ ಪ್ರತಿನಿಧಿಗಳು ಅಭಿಪ್ರಾಯಗಳನ್ನಷ್ಟೇ  ವ್ಯಕ್ತಪಡಿಸುತ್ತಿದ್ದಾರೆ ಎಂದು ಸುಷ್ಮಾ ಸ್ವರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇದೇ ವೇಳೆ ವಷಾ೯೦ತ್ಯದಲ್ಲಿ ಭಾರತ ಎನ್‍ಎಸ್‍ಜಿ ಸದಸ್ಯತ್ವ ಪಡೆದುಕೊಳ್ಳಲಿದೆ ಎ೦ದು ವಿದೇಶಾ೦ಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ಇಲಾಖೆ ಸಚಿವೆಯಾಗಿ ಎರಡು ವಷ೯ದ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ತಿಳಿಸುವ ನಿಟ್ಟಿನಲ್ಲಿ ದೆಹಲಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಮಾತನಾಡಿದ ಸುಷ್ಮಾ ಅವರು,  ಕೆಲ ವಿಷಯಗಳಿಗೆ ಸ೦ಬ೦ಧಿಸಿದ೦ತೆ ಸದ್ಯದಲ್ಲೇ ಒಮ್ಮತ ಏಪ೯ಡುವ ನಿರೀಕ್ಷೆಯಿದ್ದು, ಚೀನಾವನ್ನು ಓಲೈಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಭಾರತಕ್ಕೆ ಚೀನಾ ಬೆ೦ಬಲ ನೀಡುವ ವಿಶ್ವಾಸವಿದೆ  ಎ೦ದು ಹೇಳಿದ್ದಾರೆ.

ಎನ್‍ಎಸ್‍ಜಿ ಒಕ್ಕೂಟದ 48 ರಾಷ್ಟ್ರಗಳ ಪ್ಯೆಕಿ ಈಗಾಗಲೇ 23 ರಾಷ್ಟ್ರಗಳೊ೦ದಿಗೆ ಮಾತುಕತೆ ನಡೆಸಲಾಗಿದ್ದು, ಇವುಗಳಲ್ಲಿ 21 ರಾಷ್ಟ್ರಗಳು ಭಾರತಕ್ಕೆ ಬೆ೦ಬಲ ನೀಡಲು ಒಪ್ಪಿಗೆ ಸೂಚಿಸಿವೆ.  ಇನ್ನೆರಡು ರಾಷ್ಟ್ರಗಳು ಕೆಲ ಸ೦ದೇಹ ವ್ಯಕ್ತಪಡಿಸಿದ್ದು, ಇದಕ್ಕೆ ಸ್ಪಷ್ಟನೆ ನೀಡುವ ಮೂಲಕ ಆ ದೇಶಗಳ ಬೆ೦ಬಲವನ್ನೂ ನಾವು ಪಡೆದುಕೊಳ್ಳಲಿದ್ದೇವೆ ಎಂದು ಸುಷ್ಮಾ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com