

ಜೈಪುರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ನಂತರ ಬೆಂಕಿ ಹಚ್ಚಿರುವ ದಾರುಣ ಘಟನೆ ರಾಜಸ್ತಾನದ ಶ್ರೀ ಗಂಗಾನಗರದಲ್ಲಿ ನಡೆದಿದೆ.
ಬಾಲಕಿಯ ದೇಹ ಶೇ. 75 ರಷ್ಟು ಭಾಗ ಸುಟ್ಟು ಹೋಗಿದೆ. ತನ್ನ ಪೋಶಕರು ಮನೆಯಲ್ಲಿ ಇಲ್ಲದಾಗ ವಿಕ್ಕಿ ಮತ್ತು ಸೋನು ಹಾಗೂ ವಿಜಯ್ ಎಂಬುವರು ಆಕೆಯನ್ನು ಎತ್ತಿಕೊಂಡು ಹೋಗಿ ಆಕೆಯ ಮನೆಯ ಛಾವಣಿ ಮೇಲೆ ಗುರುವಾರ ರಾತ್ರಿ ಅತ್ಯಾಚಾರ ನಡೆಸಿದ್ದಾರೆ. ಮತ್ತು ಶನಿವಾರ ಬೆಳಗ್ಗೆ ಆಕೆಗೆ ಬೆಂಕಿ ಹಚ್ಚಲಾಯಿತು ಎಂದು ಸಂತ್ರಸ್ತೆ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ವಿಕ್ಕಿಯನ್ನು ಬಂಧಿಸಿರುವ ಪೊಲೀಸರು ಮತ್ತಿಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.