ಭಾನುವಾರ ರಾತ್ರಿ ಪಿಚೈ ಅವರ ಅಕೌಂಟ್ ಹ್ಯಾಕ್ ಮಾಡಲಾಗಿದ್ದು, ಹಲವು ಮಾಹಿತಿಗಳ ಸೋರಿಕೆಯಾಗಿದೆ ಎನ್ನಲಾಗಿದೆ. ಹ್ಯಾಕರ್ ತಂಡವನ್ನು ಅವರ್ ಮೈನ್ ಎಂದು ಗುರುತಿಸಲಾಗಿದ್ದು, ಪಿಚೈ ಅವರ ಹೆಸರಿನಲ್ಲಿ ಹಲವು ಸಂದೇಶಗಳನ್ನು ಪೋಸ್ಟ್ ಮಾಡಲಾಗಿದೆ. ಕೋರಾ ಅಕೌಂಟ್ನ ಲಿಂಕ್ ಟ್ವಿಟರ್ಗೆ ಹೊಂದಿಕೊಂಡಿರುವುದರಿಂದ ಟ್ವೀಟ್ ಅಕೌಂಟ್ ಕೂಡ ಹ್ಯಾಕ್ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ.