ಭಾರತ-ಇಸ್ರೇಲ್ ಬಾಂಧವ್ಯದ ಫಲ; ಉಡಾವಣೆಗೆ ಸಿದ್ಧವಾಯ್ತು ಖಂಡಾಂತರ ಕ್ಷಿಪಣಿ

ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ರಕ್ಷಣಾ ಒಪ್ಪಂದದ ಫಲವಾಗಿ ಜಂಟೀ ಸಂಶೋಧನೆಯಿಂದ ತಯಾರಿಸಲಾದ ಖಂಡಾಂತರ ಕ್ಷಿಪಣಿಯನ್ನು ಬುಧವಾರ ಪರೀಕ್ಷಾರ್ಥ ಉಡಾವಣೆ ಮಾಡುವ ಸಾಧ್ಯತೆ ಇದೆ.
ಖಂಡಾಂತರ ಕ್ಷಿಪಣಿ ಉಡಾವಣೆ (ಸಂಗ್ರಹ ಚಿತ್ರ)
ಖಂಡಾಂತರ ಕ್ಷಿಪಣಿ ಉಡಾವಣೆ (ಸಂಗ್ರಹ ಚಿತ್ರ)

ಬಾಲಾಸೋರ್: ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ರಕ್ಷಣಾ ಒಪ್ಪಂದದ ಫಲವಾಗಿ ಜಂಟೀ ಸಂಶೋಧನೆಯಿಂದ ತಯಾರಿಸಲಾದ ಖಂಡಾಂತರ ಕ್ಷಿಪಣಿಯನ್ನು ಬುಧವಾರ ಪರೀಕ್ಷಾರ್ಥ  ಉಡಾವಣೆ ಮಾಡುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಈಗಾಗಲೇ ಪರೀಕ್ಷೆಗೆ ಸಿದ್ಧವಾಗಿರುವ ಭಾರತ-ಇಸ್ರೇಲ್ ವಿಜ್ಞಾನಿಗಳ ಜಂಟೀ ಸಂಶೋಧನೆಯ ಖಂಡಾಂತರ ಕ್ಷಿಪಣಿ ಉಡಾವಣೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಎಲ್ಲವೂ  ಅಂದುಕೊಂಡಂತೆ ನಡೆದರೆ ಇಂದು ಪರೀಕ್ಷಾರ್ಥ ಉಡಾವಣೆ ನಡೆಯುವ ಸಾಧ್ಯತೆ ಇದೆ. ಒಡಿಶಾದ ಬಾಲಾಸೋರ್ ನಲ್ಲಿರುವ ಉಡಾವಣಾ ಕೇಂದ್ರದಲ್ಲಿ ಈಗಾಗಲೇ ಎಲ್ಲ ಸಿದ್ಧತೆಗಳು  ಪೂರ್ಣಗೊಂಡಿದ್ದು, ಬಾಲಾಸೋರ್ ನಿಂದ 15 ಕಿ.ಮೀ ದೂರದಲ್ಲಿರುವ ಚಾಂಡಿಪುರದಲ್ಲಿರುವ ಐಟಿಆರ್ (Integerated Test Range) ನಲ್ಲಿ ಉಡಾವಣೆಗೆಂದೇ ಸಿದ್ಧಪಡಿಸಲಾಗಿರುವ  ವಾಹಕದಲ್ಲಿ ಕ್ಷಿಪಣಿಯನ್ನು ಸಜ್ಜಾಗಿ ಇಡಲಾಗಿದೆ.

ಕೇಂದ್ರ ಸರ್ಕಾರ ಮತ್ತು ರಕ್ಷಣಾ ಇಲಾಖೆಯ ಅನುಮತಿ ದೊರೆಯುತ್ತಿದ್ದಂತೆಯೇ ಕ್ಷಿಪಣಿ ಉಡಾವಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಕ್ಷಿಪಣಿ ವಿಶೇಷತೆ ಏನು?
ಇನ್ನು ಹೆಸರಿದ ಈ ಕ್ಷಿಪಣಿಯ ಬಹುಉದ್ದೇಶಿತ ಕ್ಷಿಪಣಿಯಾಗಿದ್ದು, ಭೂಮಿಯಿಂದ ಭೂಮಿಗೆ ಹಾರುವ ಸಾಮರ್ಥ್ಯಹೊಂದಿದೆ. ಅಂತೆಯೇ ಬಹುಕಾರ್ಯ ಕಣ್ಗಾವಲು ವ್ಯವಸ್ಥೆ ಈ ಕ್ಷಿಪಣಿಯ  ವಿಶೇಷತೆಯಾಗಿದ್ದು, ರಾಡಾರ್ ನೀಡುವ ಎಚ್ಚರಿಕೆ ಸಂದೇಶವನ್ನು ಸ್ವೀಕರಿಸಿ ಬಳಿಕ ಶುತ್ರಪಾಳಯದ ಮೇಲೆ ದಾಳಿ ಮಾಡುತ್ತದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಭಾರತ-ಇಸ್ರೇಲ್ ಜಂಟೀ ಸಂಶೋಧನೆಯ ಫಲ
ಈ ಹಿಂದೆ ಭಾರತ ಮತ್ತು ಇಸ್ರೇಲ್ ಸರ್ಕಾರಗಳು ಮಾಡಿಕೊಂಡಿದ್ದ ಜಂಟೀ ಒಪ್ಪಂದದಂತೆ ಭಾರತದಲ್ಲಿ ಈ ಕ್ಷಿಪಣಿ ತಯಾರಿಗಿದ್ದು, ಭಾರತದ ಡಿಆರ್ ಡಿಒ ಮತ್ತು ಇಸ್ರೇಲ್ ನ ಏರೋಸ್ಪೇಸ್  ಇಂಡಸ್ಟ್ರೀ ವಿಜ್ಞಾನಿಗಳ ಸಹಭಾಗಿತ್ವದಲ್ಲಿ ಈ ಕ್ಷಿಪಣಿ ತಯಾರಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com