ಭಾರತ-ಪಾಕ್ ಗಡಿಯಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆ

ಜಮ್ಮು ಮತ್ತು ಕಾಶ್ಮೀರದ ಆರ್.ಎಸ್. ಪುರ ಪ್ರದೇಶದಲ್ಲಿನ ಭಾರತ-ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ಬಳಿ ರಹಸ್ಯ ಸುರಂಗ ಮಾರ್ಗವೊಂದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ...
ಜಮ್ಮು-ಪಾಕ್ ಗಡಿಯಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆ  (ಸಾಂದರ್ಭಿಕ  ಚಿತ್ರ)
ಜಮ್ಮು-ಪಾಕ್ ಗಡಿಯಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆ (ಸಾಂದರ್ಭಿಕ ಚಿತ್ರ)
Updated on

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಆರ್.ಎಸ್. ಪುರ ಪ್ರದೇಶದಲ್ಲಿನ ಭಾರತ-ಪಾಕಿಸ್ತಾನ ನಡುವಿನ ಅಂತಾರಾಷ್ಟ್ರೀಯ ಗಡಿ ಬಳಿ ರಹಸ್ಯ ಸುರಂಗ ಮಾರ್ಗವೊಂದು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಸುರಂಗ ಮಾರ್ಗವನ್ನು ಗಡಿ ಭದ್ರತಾ ಪಡೆ ಪತ್ತೆ ಹಚ್ಚಿದ್ದು, ಆರ್ ಎಸ್ ಪುರ ಪ್ರದೇಶದ ಅಲ್ಲಾ ಮಾಯಿ ಕೊಥಾಯ್ ಸಮೀಪ, ಗಡಿಗೆ ಹೊಂದಿಕೊಂಡಂತೆ ಈ ರಹಸ್ಯ ಸುರಂಗವನ್ನು ಕೊರೆಯಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ಈ ಸುರಂಗವು ಸುಮಾರು 50 ಅಡಿ ದೂರ ಹೊಂದಿದ್ದು, ಉಗ್ರರು ಈ ಮೂಲಕ ಭಾರತದ ಒಳ ಪ್ರವೇಶಿಸಲು ಯತ್ನಿಸುತ್ತಿದ್ದರೆಂದು ಬಿಎಸ್ ಎಫ್ ತಿಳಿಸಿದೆ. ಇದು ಬಿಎಸ್ಎಫ್ ಕಳೆದ 5 ವರ್ಷಗಳಲ್ಲಿ ಪತ್ತೆಹಚ್ಚಿರುವ 3ನೇ ರಹಸ್ಯ ಸುರಂಗವಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com