ಮಲ್ಯರಿಂದ ಪ್ರತೀ ಪೈಸೆ ವಸೂಲು: ರಾಜ್ಯಸಭೆಯಲ್ಲಿ ಜೇಟ್ಲಿ

ಸಾಲದ ಸುಳಿಯಲ್ಲಿ ಸಿಲುಕಿ, ಬ್ಯಾಂಕುಗಳಿಗೆ ಪಂಗನಾಮ ಹಾಕಿರುವ ಮದ್ಯದೊರೆ ವಿಜಯ್ ಮಲ್ಯರಿಂದ ಒಂದೊಂದು ಪೈಸೆಯನ್ನು ವಸೂಲು ಮಾಡುತ್ತೇವೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಹೇಳಿದ್ದಾರೆ...
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
Updated on: 

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿ, ಬ್ಯಾಂಕುಗಳಿಗೆ ಪಂಗನಾಮ ಹಾಕಿರುವ ಮದ್ಯದೊರೆ ವಿಜಯ್ ಮಲ್ಯರಿಂದ ಒಂದೊಂದು ಪೈಸೆಯನ್ನು ವಸೂಲು ಮಾಡುತ್ತೇವೆಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಹೇಳಿದ್ದಾರೆ.

ವಿಜಯ್ ಮಲ್ಯ ವಿದೇಶಕ್ಕೆ ಹಾರಿರುವ ಪ್ರಕರಣ ಇಂದು ರಾಜ್ಯಸಭೆಯಲ್ಲಿ ಭಾರೀ ಗದ್ದಲವನ್ನುಂಟು ಮಾಡಿತ್ತು. ಮಲ್ಯ ವಿದೇಶ ವಿಷಯವನ್ನು ಇಂದೂ ಪ್ರಸ್ತಾಪ ಮಾಡಿದ್ದ ಕಾಂಗ್ರೆಸ್ ಪಕ್ಷ ಮೋದಿ ಸರ್ಕಾರ ಪರೋಕ್ಷವಾಗಿ ಮಲ್ಯ ವಿದೇಶಕ್ಕೆ ಹಾರಲು ಸಹಾಯ ಮಾಡಿದೆ ಎಂದು ಆರೋಪ ವ್ಯಕ್ತಪಡಿಸಿದ್ದರು.

ಈ ಕುರಿತಂತೆ ಮಾತನಾಡಿದ್ದ ಗುಲಾಂ ನಬಿ ಆಜಾದ್ ಅವರು, ಮಲ್ಯ ಅವರಿಗೆ ಸಹಾಯ ಮಾಡಿಲ್ಲ ಎಂದು  ಸರ್ಕಾರ ವಾದ ಮಾಡುವುದೇ ಆದರೆ, ಮಲ್ಯ ಅವರನ್ನು ಈ ವರೆಗೂ ಬಂಧನಕ್ಕೊಳಪಡಿಸಿಲ್ಲವೇಕೆ? ಅವರ ಪಾಸ್ ಪೋರ್ಟ್ ನ್ನು ವಶ ಪಡಿಸಕೊಳ್ಳಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಮಲ್ಯ ಅವರೇನು ಸೂಜಿಯಲ್ಲ ಕಾಣಿಸಲಿಲ್ಲ ಎಂದು ಹೇಳುವುದಕ್ಕೆ ಕಿಲೋಮೀಟರ್ ದೂರದಲ್ಲಿ ಇದ್ದರೂ ಕೂಡ ಅವರು ಕಾಣಿಸುತ್ತಾರೆ ಎಂದು ಹೇಳಿದ್ದರು.

ಇದಕ್ಕೆ ಉತ್ತರಿಸಿದ ಜೇಟ್ಲಿ ಅವರು, ಸಿಬಿಐ ತನಿಖೆ ಪ್ರಗತಿಯಲ್ಲಿದ್ದು, ಎಲ್ಲರಿಗೂ ನ್ಯಾಯಸಿಗಲಿದೆ ಎಂದು ವಿರೋಧ ಪಕ್ಷಗಳಿಗೆ ಭರವಸೆ ನೀಡಿದರು. ಬ್ಯಾಂಕುಗಳು ಮಲ್ಯ ಅವರಿಂದ ಹಣವನ್ನು ಹಿಂಪಡೆಯಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಬ್ಯಾಂಕುಗಳು ಸುಪ್ರೀಂ ಮೊರೆ ಹೋಗುವುದಕ್ಕೂ ಮುನ್ನವೇ ಮಲ್ಯ ವಿದೇಶಕ್ಕೆ ಹಾರಿದ್ದರು. ಖಾತೆ ಚಾಲ್ತಿಯಲ್ಲಿಲ್ಲದ ಸಂದರ್ಭದಲ್ಲಿಯೇ ಮಲ್ಯ ಅವರು 2004ರಲ್ಲಿ ಬ್ಯಾಂಕಿನ ಎಲ್ಲಾ ಸೌಲಭ್ಯವನ್ನು ಬಳಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಅಲ್ಲದೆ, ಇದೇ ವೇಳೆ ಲಲಿತ್ ಮೋದಿ ಪ್ರಕರಣವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದ ಜೇಟ್ಲಿ ಅವರು, ಲಲಿತ್ ಮೋದಿ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳಿದ್ದವು. ಆದರೆ, ಅವರನ್ನೇಕೆ ನೀವು ತಡೆಯಲಿಲ್ಲ. ಯಾಕೆ ಬಂಧಿಸಲಿಲ್ಲ. ಈ ಬಗ್ಗೆ ವಿವರಗಳನ್ನು ನಾನು ನೀಡುತ್ತೇನೆ. ಈ ಬಗ್ಗೆ ಸಾಕಷ್ಟು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ ತಿರುಗೇಟು ನೀಡಿದರು.
 
ನಂತರ ಮಾಡನಾಡಿಕ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಅವರು, ವಿಜಯ್ ಮಲ್ಯ ನಮಗೇನು ದೈವನಲ್ಲ. ಮಲ್ಯ ಸಾಕಷ್ಟು ಸಾಲ ಹಾಗೂ ಹಣವನ್ನು ಹಿಂತಿರುಗಿಸಬೇಕು. ಎನ್ ಡಿಎ ಸರ್ಕಾರ ಮಲ್ಯಗೆ ಒಂದು ಪೈಸೆಯನ್ನೂ ನೀಡಿಲ್ಲ. ಇದೀಗ ಕೇಳಿಬರುತ್ತಿರುವ ಹಣ ವ್ಯವಹಾರ ವಿವಾದ ನಡೆದಿರುವುದು ಯುಪಿಎ ಸರ್ಕಾರದ ಅವಧಿಯಲ್ಲಿ ಎಂದು ಹೇಳಿದರು.

ನಂತರ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಇಶ್ರಾತ್ ಜಹಾನ್ ಪ್ರಕರಣವನ್ನು ಪ್ರಸ್ತಾಪ ಮಾಡಿದರು. ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಏನನ್ನೂ ಮಾತನಾಡದ ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರು ಲೋಕಸಭೆಯಿಂದ ಹೊರ ನಡೆದರು.

ಮಲ್ಯ ವಿವಾದ ಕುರಿತಂತೆ ರಾಜ್ಯಸಭೆ ಹೊರಗೆ ಮಾತನಾಡಿರುವ ರಾಹುಲ್ ಗಾಂಧಿ ಅವರು, ವಿಜಯ್ ಮಲ್ಯ 9 ಸಾವಿರ ಕೋಟಿಯನ್ನು ತೆಗೆದುಕೊಂಡು ದೇಶ ಬಿಟ್ಟು ಓಡಿಹೋಗಿದ್ದಾರೆ. ಸರ್ಕಾರಿ ಫೇರ್ ಆ್ಯಂಡ್ ಲವ್ಲಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com