ನಿತಿಶ್ ಕುಮಾರ್ ಇಂದು ಹಜಿಪುರದಲ್ಲಿ ನಿರ್ಮಾಣವಾಗಿರುವ ನೂತನ ದಿಘಾ-ಸೋನೆಪುರ್ ರೈಲ್ ಹಾಗೂ ರಸ್ತೆ ಸೇತುವೆ ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಕೆಲವರು ಮೋದಿ ಮೋದಿ ಎಂದು ಘೋಷಣೆ ಕೂಗಲು ಆರಂಭಿಸಿದರು. ವೇದಿಕೆಯಲ್ಲಿದ್ದ ಪ್ರಧಾನಿ ಮೋದಿ ಅವರು ಕೂಡಲೇ ಎದ್ದು ನಿಂತು, ಘೋಷಣೆ ಕೂಗುತ್ತಿದ್ದ ಸಮೂಹವನ್ನು ಶಾಂತವಾಗಿಸಲು ಯತ್ನಿಸಿದರು.