ನನ್ನನ್ನು ಮೋದಿ ಚಮಚಾ ಎಂದು ಕರೆದರೇ, ಅದಕ್ಕಿಂತ ದೊಡ್ಡ ಸೌಭಾಗ್ಯವಿಲ್ಲ: ಅನುಪಮ್ ಖೇರ್

ತಮ್ಮನ್ನು ಮೋದಿ ಅವರ ಚಮಚಾ (ಬಂಟ) ಎಂದು ಕರೆದರೂ ಪರವಾಗಿಲ್ಲ. ಹಾಗಂತ ಕರೆಸಿಕೊಳ್ಳುವುದಕ್ಕಿಂತ ದೊಡ್ಡ ಸೌಭಾಗ್ಯ ಬೇರೆ ಇಲ್ಲ ಎಂದು ನಟ ಅನುಪಮ್...
ಅನುಪಮ್ ಖೇರ್
ಅನುಪಮ್ ಖೇರ್
Updated on: 

ನವದೆಹಲಿ: ತಮ್ಮನ್ನು ಮೋದಿ ಅವರ ಚಮಚಾ (ಬಂಟ) ಎಂದು ಕರೆದರೂ ಪರವಾಗಿಲ್ಲ. ಹಾಗಂತ ಕರೆಸಿಕೊಳ್ಳುವುದಕ್ಕಿಂತ ದೊಡ್ಡ ಸೌಭಾಗ್ಯ ಬೇರೆ ಇಲ್ಲ ಎಂದು ನಟ ಅನುಪಮ್ ಖೇರ್  ಹೇಳಿದ್ದಾರೆ.

ಖಾಸಗಿ ಟಿವಿ ಚಾನೆಲ್ ವೊಂದರ  ಕಾರ್ಯಕ್ರಮದಲ್ಲಿ ಮಾತನಾಡಿದ ಅನುಪಮ್ ಖೇರ್ ಇದೇ ಮೊದಲ ಬಾರಿಗೆ ತಾವು ಮೋದಿ ಅವರ ಪರಮ ಅಭಿಮಾನಿ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಮೋದಿ ಅವರ ಚಮಚಾ ಎಂದು ಕರೆಸಿಕೊಳ್ಳಲು ನನಗೇನೂ ಅವಮಾನವಿಲ್ಲ. ಚಮ್ಚಾ ಎನ್ನುವ ಪದ ಸರಿ ಎನ್ನಿಸಿದರೆ ಹಾಗೇ ಕರೆಯಿರಿ,' ಎಂದು ಖೇರ್ ಹೇಳಿದರು.

ನಾವು ಸಣ್ಣ ಮಕ್ಕಳಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪರ ಘೋಷಣೆ ಕೂಗುತ್ತಿದ್ದೆವು. ಶಾಲೆಗಳಲ್ಲಿ ಮೋದಿ ಅವರಿಗೆ ಮಕ್ಕಳು ಜೈಕಾರ ಹಾಕಬೇಕೆಂದೂ ಅವರು ಅಭಿಪ್ರಾಯಪಟ್ಟರು. ಮೋದಿ ಅವರಿಗೆ ಜೈಕಾರ ಹಾಕುವುದರಲ್ಲಿ ಏನು ತಪ್ಪಿದೆ?,' ಎಂದು ಅವರು ಪ್ರಶ್ನಿಸಿದ್ದಾರೆ.

ಮಹಿಳೆಯರ ಶೌಚಾಲಯದ ಬಗ್ಗೆ ಮೊದಲ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ. ದೇಶ ಪ್ರೇಮದ ಬಗ್ಗೆ ನನ್ನಲ್ಲಿ ಭಾವುಕತೆ ಹುಟ್ಟುವಂತೆ ಮಾಡಿದ್ದು ಅವರೇ ಎಂದು ಖೇರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com