ಭಾರತದೊಳಗೆ ಪಾಕ್ ತಂಡವನ್ನು ಬಿಟ್ಟಿದ್ದು ತಪ್ಪು: ಸುಬ್ರಮಣಿಯನ್ ಸ್ವಾಮಿ

ಪಾಕಿಸ್ತಾನ ತಂಡ ಆಟಗಾರರಿಗೆ ಭಾರತದೊಳಗೆ ಪ್ರವೇಶ ನೀಡಿದ್ದು ದೊಡ್ಡ ತಪ್ಪು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ...
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ಪಾಕಿಸ್ತಾನ ತಂಡ ಆಟಗಾರರಿಗೆ ಭಾರತದೊಳಗೆ ಪ್ರವೇಶ ನೀಡಿದ್ದು ದೊಡ್ಡ ತಪ್ಪು ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು  ಐಸಿಸಿ ವಿಶ್ವಕಪ್ ಟಿ20 ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡುವಿನ ಪಂದ್ಯವನ್ನು ಕೋಲ್ಕತಾಕ್ಕೆ  ಸ್ಥಳಾಂತರಿಸಿದ ಬೆನ್ನಲ್ಲೇ ಪಂದ್ಯಕ್ಕೆ ಅಭಿಮಾನಿಗಳ ಸೋಗಿನಲ್ಲಿ ಇಸಿಸ್ ಉಗ್ರರು ಒಳ ಬರುವ ಸಾಧ್ಯತೆಗಳಿವೆ. ಉದ್ಧವ್ ಠಾಕ್ರೆ ಅವರು ಈ ಕುರಿತಂತೆ ನೀಡಿದ್ದ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುತ್ತೇನೆ. ಭಾರತದ ಬದಲಿಗೆ ಶ್ರೀಲಂಕಾ, ಮಾಲ್ಡಿವ್ಸ್ ಅಥವಾ ಢಾಕಾದಲ್ಲಿ ಪಂದ್ಯವನ್ನು ಆಯೋಜಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಪಾಕಿಸ್ತಾನ ದೇಶವು ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸುವವರೆಗೂ ಯಾವುದೇ ಪಂದ್ಯಗಳನ್ನು ಭಾರತದಲ್ಲಿ ಆಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನುಮತಿ ನೀಡಬಾರದು ಎಂದು ಆಗ್ರಹಿಸಿದ್ದಾರೆ.

ಈ ಹಿಂದಷ್ಟೇ ಟಿ-20 ಕ್ರಿಕೆಟ್ ಪಂದ್ಯಾವಳಿ ಕುರಿತಂತೆ ಮಾತನಾಡಿದ್ದ ಉದ್ಧವ್ ಠಾಕ್ರೆ ಅವರು, ಗಡಿಯಲ್ಲಿ ಭದ್ರತಾ ಪಡೆಗಳ ನೆಲೆಗಳ ಮೇಲೆ ಉಗ್ರರು ಬಾಂಬ್ ಹಾಕುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಆಟಗಾರರಿಗೆ ಭಾರತ ಪ್ರವೇಶ ನೀಡುವುದು ಸರಿಯಲ್ಲ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com