ಕಛ್'ನಲ್ಲಿ ಹಿಟ್ ಆ್ಯಂಡ್ ರನ್: 3 ಸಾವು, 6 ಗಾಯ

ಗುಜರಾತ್ ನ ಕಛ್ ಜಿಲ್ಲಯ ಗಾಂಧಿಧಾಮ್ ನಲ್ಲಿ ಹಿಂಡ್ ಅಂಡ್ ರನ್ ತಡರಾತ್ರಿ ಹಿಟ್ ಆ್ಯಂಡ್ ರನ್ ನಡೆಸಿದ್ದು, ರಸ್ತೆಯಲ್ಲಿದ್ದ 9 ಮಂದಿಯ ಮೇಲೆ ಕಾರು ಹರಿದ ಪರಿಣಾಮ ಮೂವರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಛ್: ಗುಜರಾತ್ ನ ಕಛ್ ಜಿಲ್ಲಯ ಗಾಂಧಿಧಾಮ್ ನಲ್ಲಿ ಹಿಂಡ್ ಅಂಡ್ ರನ್ ತಡರಾತ್ರಿ ಹಿಟ್ ಆ್ಯಂಡ್ ರನ್ ನಡೆಸಿದ್ದು, ರಸ್ತೆಯಲ್ಲಿದ್ದ 9 ಮಂದಿಯ ಮೇಲೆ ಕಾರು ಹರಿದ ಪರಿಣಾಮ ಮೂವರು ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗೊಂಡಿರುವುದಾಗಿ ತಿಳಿದುಬಂದಿದೆ.

ತಡರಾತ್ರಿ ಇದ್ದಕ್ಕಿದ್ದಂತೆ ಬಂದಿರುವ ಕಾರೊಂದು ರಸ್ತೆಯಲ್ಲಿ ಓಡಾಡುತ್ತಿದ್ದ 9 ಜನರ ಮೇಲೆ ಹರಿದಿದೆ. ಈ ವೇಳೆ ಸ್ಥಳದಲ್ಲಿಯೇ 3 ಜನ ದುರ್ಮರಣವನ್ನಪ್ಪಿದ್ದಾರೆ. ಅಲ್ಲದೆ, ಗಾಯಗೊಂಡ 6 ಮಂದಿಯ ಪೈಕಿ ಇಬ್ಬರು ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಇದರಂತೆ ಘಟನೆ ವೇಳೆ ಕಾರು ಸ್ಥಳದಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೂ ಗುದ್ದಿದ್ದು, ಸ್ಕೂಟಿ ಸಂಪೂರ್ಣವಾಗಿ ಜಖಂಗೊಂಡಿರುವುದಾಗಿ ತಿಳಿದುಬಂದಿದೆ, ಘಟನೆ ಬಳಿಕ ಕಾರು ಚಾಲಕ ಪರಾರಿಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com