

ಸಿಲ್ಚಾರ್: ನೂರು ಬಾರಿ ಭಾರತ್ ಮಾತಾ ಕಿ ಜೈ ಎಂದು ಹೇಳುತ್ತೇನೆ. ಘೋಷಣೆ ಕೂಗುವುದರಲ್ಲಿ ತಪ್ಪೇನಿದೆ. ಆದರೆ, ಬಿಜೆಪಿಗೆ ಎಂದಿಗೂ ಮತ ಹಾಕುವುದಿಲ್ಲ ಎಂದು ನಿವೃತ್ತ ಅಸ್ಸಾಂ ರಾಜ್ಯ ವಿದ್ಯುತ್ ಮಂಡಳಿ ಅಧಿಕಾರಿ ತಾಜುದ್ದೀನ್ ಬರ್ಭುಯಾನ್ ಅವರು ಹೇಳಿಕೊಂಡಿದ್ದಾರೆ.
ಭಾರತ್ ಮಾತಾ ಕಿ ಜೈ ವಿವಾದ ಕುರಿತಂತೆ ಮಾತನಾಡಿರು ಅವರು, ಘೋಷಣೆ ಕೂಗುವದಲ್ಲಿ ತಪ್ಪೇನಿದೆ? ನಾನು ಭಾರತೀಯನಲ್ಲ. ನಾನು ಅಸಾದುದ್ದೀನ್ ಓವೈಸಿ ಕಡೆಯವನೂ ಅಲ್ಲ. ನಾನು ನೂರು ಭಾರತ್ ಮಾತಾ ಕಿ ಜೈ ಎಂದು ಕೂಗುತ್ತೇನೆ ಎಂದು ಹೇಳಿದ್ದಾರೆ.
ಜೆಎನ್ ಯು ವಿವಾದ ಸಂಬಂಧ ಆಗುತ್ತಿರುವ ಬೆಳವಣಿಗೆಗಳನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಕನ್ಹಯ್ಯ ಸಮರ್ಥನೆಯಲ್ಲಿ ಯಾವುದೇ ತಪ್ಪಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಆತನ ವಿರುದ್ಧ ದೇಶದ್ರೋಹಿ ಪ್ರಕರಣ ದಾಖಲಿಸಿದೆ. ಬಿಜೆಪಿ ದ್ವೇಷದ ಹಾಗೂ ಅಸಹಿಷ್ಣುತೆಯ ರಾಜಕೀಯವನ್ನು ಮಾಡುತ್ತಿದ್ದು, ಬಿಜೆಪಿಗೆ ಎಂದಿಗೂ ಮತ ಹಾಕುವುದಿಲ್ಲ. ನಾನು ಕಾಂಗ್ರೆಸ್ ಮತ ಹಾಕಲು ಇಚ್ಛಿಸುತ್ತೇನೆ. ನಮ್ಮ ಜೀವನಕ್ಕೆ ಕಾಂಗ್ರೆಸ್ ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದಾರೆ.