ನನ್ನ ಮನೆಗೆ ಪಾಕ್‌ ಮಾಜಿ ಪ್ರಧಾನಿ ಗಿಲಾನಿ ಬಂದಿದ್ದರು: ಡೇವಿಡ್ ಹೆಡ್ಲಿ

ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸುತ್ತಿರುವ 26/11 ಮುಂಬೈ ದಾಳಿ ಪ್ರಕರಣದ ಸಂಚುಕೂರ ಉಗ್ರ ಡೇವಿಡ್ ಹೆಡ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ...
ಯೂಸುಫ್ ರಜಾ ಗಿಲಾನಿ
ಯೂಸುಫ್ ರಜಾ ಗಿಲಾನಿ

ಮುಂಬೈ: ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸುತ್ತಿರುವ 26/11 ಮುಂಬೈ ದಾಳಿ ಪ್ರಕರಣದ ಸಂಚುಕೂರ ಉಗ್ರ ಡೇವಿಡ್ ಹೆಡ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಜಾ ಗಿಲಾನಿ ನನ್ನ ಮನೆಗೆ ಬಂದಿದ್ದರು ಎಂದು ಹೇಳಿದ್ದಾನೆ.

ಮುಂಬೈ ಮೇಲಿನ ದಾಳಿ ಘಟನೆಯ ಒಂದು ತಿಂಗಳ ಬಳಿಕ ಅಂದರೆ 2008ರ ಡಿಸೆಂಬರ್‌ 26ರಂದು ನನ್ನ ತಂದೆ ನಿಧನರಾಗಿದ್ದರು. ಅದಾದ ಕೆಲ ವಾರಗಳ ಬಳಿಕ ಗಿಲಾನಿ ಪಾಕಿಸ್ತಾನದಲ್ಲಿರುವ ನನ್ನ ಮನೆಗೆ ಬಂದಿದ್ದರು. ಅವರು ನನ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಹೆಡ್ಲಿ ತಿಳಿಸಿದ್ದಾನೆ.

ನಾನು ಉಗ್ರರ ಜತೆ ನಂಟು ಹೊಂದಿರುವ ವಿಷಯ ತಂದೆಗೆ ತಿಳಿದಿತ್ತು. ಅದನ್ನು ಅವರು ವಿರೋಧಿಸಿದ್ದರು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸುವ ವೇಳೆ ತಿಳಿಸಿದ್ದಾನೆ. ಹೆಡ್ಲಿಯ ತಂದೆ ರೇಡಿಯೊ ಪಾಕಿಸ್ತಾನ್‌ ನಲ್ಲಿ ನಿರ್ದೇಶಕರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com