ಟೀ ತೋಟದ ಕೆಲಸಗಾರರ ದುರಾವಸ್ಥೆ ಸರಿಪಡಿಸುವಲ್ಲಿ ಮೋದಿ ವಿಫಲ: ಸೋನಿಯಾ

ಅಸ್ಸಾಂ ಚಹಾದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯವರು ಇಲ್ಲಿನ ಟೀ ತೋಟದ ಕೆಲಸಗಾರರ ದುರಾವಸ್ಥೆಯನ್ನು ಸರಿಪಡಿಸುವಲ್ಲಿ...
ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿ
ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿ
Updated on: 

ಶಿವಸಾಗರ್: ಅಸ್ಸಾಂ ಚಹಾದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯವರು ಇಲ್ಲಿನ ಟೀ ತೋಟದ ಕೆಲಸಗಾರರ ದುರಾವಸ್ಥೆಯನ್ನು ಸರಿಪಡಿಸುವಲ್ಲಿ ವಿಫಲರಾಗಿದ್ದಾರೆಂದು ಕಾಂಗ್ರೆಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಹೇಳಿದ್ದಾರೆ.

ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಶಿವನಗರದಲ್ಲಿ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಸ್ಸಾಂ ಚಹಾದ ಬಗ್ಗೆ ಹೊಗಳುತ್ತಾರೆ. ಆದರೆ, ಇಲ್ಲಿನ ಟೀ ತೋಟದ ಕೆಲಸಗಾರರ ದುರಾವಸ್ಥೆಯನ್ನು ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.

ಗಗೋಯ್ ಅವರು ಟೀ ತೋಟದ ಕೆಲಸಗಾರರ ವೇತನವನ್ನು ಹೆಚ್ಚಳ ಮಾಡಿದ್ದಾರೆ. ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ಸಾಂ ವಿಷಯದಲ್ಲಿ ಪಕ್ಷಪಾತ ಮಾಡುತ್ತಿದ್ದು, ಮುಖ್ಯಮಂತ್ರಿ ತರುಣ್ ಗಗೋಯ್ ಅವರು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕರೆದೊಯ್ಯಲು ಪ್ರತಿ ನಿತ್ಯ ಹರಸಾಹಸ ಪಡುತ್ತಿದ್ದಾರೆ.

ಅಸ್ಸಾಂನಲ್ಲಿ ಇಂದು ಶಾಂತಿ ನೆಲೆಸಿದೆ ಎಂದರೆ, ಇದರಲ್ಲಿ ಕಾಂಗ್ರೆಸ್ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಆದರೆ, ಅಸ್ಸಾಂ ಇಂದಿಗೂ ಅಪಾಯದಲ್ಲಿದೆ. ಕಾಂಗ್ರೆಸ್ ಕುರಿತು ಯಾವ ಕಾರಣಕ್ಕೆ ಟೀಕೆಗಳು ವ್ಯಕ್ತವಾಗುತ್ತಿದೆ ಹೇಳಿ, ಅಸ್ಸಾಂನ ಪ್ರತಿ ಭಾಗದಲ್ಲೂ ಕಾಂಗ್ರೆಸ್ ಇದೆ ಎಂಬುದು ಅವರಿಗೆ ತಿಳಿದಿರುವ ಕಾರಣಕ್ಕೆ. ಗಗೋಯ್ ಅಧಿಕಾರಾವಧಿಯಲ್ಲಿ ರಾಜ್ಯ ಪ್ರಗತಿಪರ ರಾಜ್ಯವಾಗಿದೆ.

ಮೋದಿಯವರು ಅಸ್ಸಾಂಗೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕಿತ್ತುಕೊಂಡರು. ನಮಗೆ ಯಾವಾಗ ಅಚ್ಛೇ ದಿನ್ ಬರುತ್ತದೆ ಎಂದು ಜನರು ಇಂದು ಮೋದಿಯವನ್ನು ಪ್ರಶ್ನಿಸುತ್ತಿದ್ದಾರೆ. ಮೋದಿಯವರನ್ನು ಕೆಲವು ಪ್ರಶ್ನೆಗಳನ್ನು ಕೇಳಲು ಇಚ್ಛಿಸುತ್ತೇನೆ, ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಜನಾಂಗದವರಿಗೆ ಈ ಬಾರಿಯ ಬಜೆಟ್ ನಲ್ಲಿ ಕಡಿಮೆ ಆದ್ಯತೆಯನ್ನು ಯಾವ ಕಾರಣಕ್ಕೆ ನೀಡಲಾಗಿದೆ.

ಈ ಹಿಂದೆ ನೀವು ನೀಡಿದ್ದ ಭರವಸೆಗಳು ಏನಾದವು. ಭರವಸೆ ನೀಡಿ 2 ವರ್ಷಗಳು ಕಳೆಯುತ್ತಿವೆ. ಯುವಕರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಕಪ್ಪು ಹಣವನ್ನು ಭಾರತಕ್ಕೆ ತರುವುದಾಗಿ ಹೇಳಿದ್ದಿರಿ, ಏನಾಯಿತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಆಹಾರ ಪದ್ಧತಿಯ ಮೇಲೆ ನಿಷೇಧ ಹೇರುವ ಸರ್ಕಾರವನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಅಸ್ಸಾಂ ಜನತೆ ಬಿಜೆಪಿಗೆ ಹೇಳಬೇಕೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com